Charvi S
Chow Chow Charvi
VII Sem, ECE
ಯಾವತ್ತಾದ್ರೂ ಸಂಪಾದಕ ಮಂಡಳಿಯ ಒಕ್ಕೂಟ ಸಭೆ ಗದ್ದಲ ಇಲ್ದೆ ತಂಪಾಗಿ ನಡಿತಾ ಇದೆ ಅಂತ ಅಂದ್ರೆ ಯಾರೋ ಅವತ್ತು ಮಿಸ್ ಇದ್ದಾರೆ ಅಂತ ಅರ್ಥ. ಅದು ಬೇರೆ ಯಾರು ಅಲ್ಲ ಚಟಪಟ ಅಂತ ಮಾತಾಡೋ ಚಾರ್ವಿ. ಸಂಪಾದಕರ ಮರುನಾಮಕರಣ ಪದ್ಧತಿಯನ್ನು ತಾನೇ ಆರಂಭಿಸಿ ಕೊನೆಗೆ ವಿಧಿ ಇಲ್ಲದೆ ತನಗೆ "ಚೌ ಚೌ ಚಾರ್ವಿ" ಎಂಬ ಬಿರುದನ್ನು ಪಡೆಯಬೇಕಾಯಿತು. ದುರದೃಷ್ಟವಶಾತ್ ಈಗ ಚಾರ್ವಿಗೆ ಕನ್ನಡ ಕಾಗುಣಿತದಲ್ಲಿ ಇಷ್ಟವಾಗದ ಒಂದೇ ಒಂದು ಅಕ್ಷರ ಎಂದರೆ "ಚೌ ಚೌ". ಈಕೆಯ ಇರುವಿಕೆ ಇಲ್ಲದಿದ್ದರೆ ನಮ್ಮ ಕಾರ್ಯಕ್ರಮಗಳಲ್ಲಿ ಸಂಭ್ರಮದ ವಾತಾವರಣವೇ ಕಾಣದು. ಅಪರಿಚಿತರನ್ನು ಪರಿಚಯಿಸಿಕೊಂಡು, ಅಂತರ್ಮುಖಿಯನ್ನು ಬಹುರ್ಮುಖಿಯಾಗುವಂತೆ ಮಾಡಬಲ್ಲಳು ಈಕೆ. ಇವಳು ಸಕಲಕಲಾವಲ್ಲಭೆ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಈಕೆ ಸುಶ್ರಾವ್ಯವಾಗಿ ಹಾಡಬಲ್ಲ ಹಾಡುಗಾರ್ತಿ, ನಿರರ್ಗಳವಾಗಿ ಮಾತನಾಡಬಲ್ಲ ನಿರೂಪಕಿ, ಕ್ರಿಯಾತ್ಮಕ ವಿಚಾರಧಾರೆ ಹೊಂದಿರುವ ಬರಹಗಾರ್ತಿ. ಸಂಗೀತ ಪ್ರಿಯೆಯಾದ ಈಕೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪಾಂಡಿತ್ಯವನ್ನು ಹೊಂದಿದ್ದು ಆಗಾಗ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತನ್ನ ಸಂಗೀತ ಕಲಾ ಪ್ರದರ್ಶನದೊಂದಿಗೆ ಕಾಣಿಸಿಕೊಳ್ಳುತ್ತಾಳೆ. ಅವಳ ಪ್ರಿಯ ರಾಗವಾದ "ಷಣ್ಮುಖಪ್ರಿಯ" ರಾಗವನ್ನು ಹಾಡುವುದನ್ನು ಒಮ್ಮೆ ಕೇಳಬೇಕೆಂಬ ಆಸೆ ನನಗಾಗಿದೆ.
ಚಾರ್ವಿ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿಧೇಯ ವಿದ್ಯಾರ್ಥಿನಿ. ನಾವೆಲ್ಲ EC ಕಷ್ಟದ ವಿಷಯ ಎಂದರೆ ಚಾರ್ವಿಗೆ ಮಾತ್ರ EC ವಿಭಾಗದ ವಿಷಯಗಳಾಗಲಿ, EC ವಿಭಾಗದ ಸಂಪಾದಕರಾಗಲಿ ಎಲ್ಲವೂ ಬಹಳ ಅಚ್ಚುಮೆಚ್ಚು. JCಯಲ್ಲಿ EC ಮಾಡುವುದು ಗರ್ವ ಪಡುವ ವಿಷಯ ಎನ್ನುವುದು ಈಕೆಯ ವಾದ. ವಾದ ಎಂದಾಕ್ಷಣ ನೆನಪಾಯಿತು. ಸಂಪಾದಕ ಮಂಡಳಿಯ ಲೇಡಿ ಡಾನ್ ಎಂದೇ ಕರೆಯಲ್ಪಡುತ್ತಿದ್ದ ಚಾರ್ವಿ ಒಡನೆ ನೀವು ವಾದಕ್ಕೆ ನಿಲ್ಲುವಿರಿ ಎಂದರೆ ನಿಮ್ಮ ಬಳಿ ೨೫೫ಊzಕ್ಕಿಂತ ಏರು ಧ್ವನಿ ಹಾಗು ಸ್ವಲ್ಪ ಮನೋಕುಶಲತೆಯ ಚಾಲಕಿತನವಿದ್ದರೆ ಸಾಕು. "ಓ ಹೆಲೋ, ಏನು!" ಎಂದು ಬೆದರಿಸುತ್ತಾ ವಾದ ಆರಂಭ ಮಾಡುವ ಈಕೆ ಕೊನೆಗೆ "ನಂಗೇನೂ ಗೊತ್ತಿಲ್ಲಪ್ಪಾ ನಾನು ತುಂಬಾ ಒಳ್ಳೆವ್ಳು..." ಎಂದು ಮಾಯವಾಗುವಳು. ಈಕೆಯ instagram feed ವಿಚಿತ್ರವಾಗಿದ್ದು ಅದನ್ನು ಪ್ರಶ್ನಿಸಿದಾಗ ಪ್ರಶ್ನೆ ಮಾಡಿದವರ feed ಸರಿಯಾಗಿಲ್ಲ ಎಂದು ಹೇಳಿಕೊಂಡು ತಿರುಗುತ್ತಾಳೆಂದು ಸಹ ಸಂಪಾದಕರಿAದ ಬಂದ ಆರೋಪ. ತನ್ನ ಸ್ಕ್ರೀನ್ ಟೈಮ್ ನಿರ್ವಹಣೆ ಬಗ್ಗೆ ಸ್ವಲ್ಪ ಗಂಭೀರ ನಿರ್ಧಾರ ತೆಗೆದುಕೊಂಡಿರುವ ಇವಳು reels ನೋಡಲೆಂದೇ ೧-೨ ಗಂಟೆಗಳ ಕಾಲಮಿತಿ ಇಟ್ಟಿರುವಳು.
Su from so ಚಿತ್ರದ ರವಿ ಅಣ್ಣನ ಹಾಗೆ ಸಂಪಾದಕ ಮಂಡಳಿಯ ಚಾರ್ವಿ ಅಕ್ಕ ಎಂದರೆ ತಪ್ಪಾಗಲಾರದು. ಯಾವುದೇ ಕೆಲಸವಾಗಲಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ಯಾರಿಗೆ ಯಾವುದೇ ಸಹಾಯ ಬೇಕಾಗಿರಲಿ ಅಥವಾ ಸಂಶಯವಿರಲಿ, ಚಾರ್ವಿ ನೆರವು ಸಿಗುವುದು ಖಚಿತ! ಈ ವರ್ಷ ಕನ್ನಡ ವಿಭಾಗದಲ್ಲಿ ಕಿರಿಯ ಸಂಪಾದಕರ ಸೇರ್ಪಡೆಯಾದಾಗಿಲಿಂದ ಚಾರ್ವಿಯ ಮಾತೃ ಭಾವನೆ ಹೆಚ್ಚಾಗಿ ಕಾಣಬಹುದಾಗಿದೆ. ಇದರೊಂದಿಗೆ ಉಪೌದ್ಯೋಗವನ್ನಾಗಿ ಇನ್ಸ್ಟಾಗ್ರಾಮ್ ಲಾಗಿನ್ ಆಗುವವರು ಚಾರ್ವಿಗೆ ಶೇಕಡಾವಾರು ಹಣವನ್ನು (₹೧೨-₹೫೦೦) ನೀಡಿ ಅನುಮತಿ ಪಡೆದುಕೊಳ್ಳುವ ಹೊಸ ಪದ್ಧತಿಯನ್ನು ಶುರುಮಾಡಿದ್ದು ಈಗ ಕಿರಿಯ ಸಂಪಾದಕರು ಕೂಡ ಈ ಚಾಲಕಿ ಮಂತ್ರವನ್ನು ಕಲಿತುಕೊಂಡಿದ್ದು "ಗುರುವಿಗೆ ತಿರುಮಂತ್ರ"ವಾಗಿದೆ. ಕಾಲೇಜಿನಲ್ಲಿ ಚಾರ್ವಿಯ ಸ್ನೇಹ ಬಳಗ ಬಹಳ ದೊಡ್ಡದು. ಪಿ . ಎಸ್ ಪಾರ್ಕಿಂಗ್ ಲಾಟ್ನಲ್ಲಿ ಹೆಚ್ಚು ಸಮಯ ಕಳೆಯುವ ಇವರ ಬಳಗದಲ್ಲಿ ನಮ್ಮ ಚಾರ್ವಿ ಅವರೇ ಲೇಡಿ ಬಾಸ್ ಇರಬೇಕು. ನಾನು ಕೇಳಿಬಂದAತೆ ಚಾರ್ವಿ ಬಳಿ ಒಂದು ಸೂಪರ್ ಪವರ್ ಇದೆಯಂತೆ. ಈಕೆ ಸ್ನೇಹಿತೆಯರೊಂದಿಗೆ ಏನನ್ನಾದರೂ ಖರೀದಿಸಲು ಹೋದಾಗ ಅವರ್ಯಾರಿಗೂ ಸಿಗದಂತಹ ವಿಭಿನ್ನ ವಸ್ತುಗಳು ಅಥವಾ ಸ್ಟೈಲಿಶ್ ವಸ್ತ್ರಗಳು ಈಕೆಗೆ ಸಿಗುವುದು. ಒಮ್ಮೆ ಪುಟ್ಟ ಪುಟ್ಟ ಸ್ಟಾರ್ ಫಿಶ್ ಆಕಾರದ ಲಿಪ್ಸ್ಟಿಕ್ ಒಂದಿಷ್ಟನ್ನು ತಂದು ಸಂಪಾದಕಿಯರಿಗೆಲ್ಲ ತೋರಿಸುತ್ತಿದ್ದಳು. ಇಂತಹ ಅದೃಷ್ಟ ಹಲವರಲ್ಲಿ ಕೆಲವರಿಗೆ ಮಾತ್ರ ಇರಲು ಸಾಧ್ಯ!
ಚಾರ್ವಿ ಅವರ ಮನೆಯಲ್ಲಿ ಮುದ್ದಿನ ಮಗಳು, ಮುದ್ದಿನ ಮಕ್ಕಳಿಗೆ ಕೆಲವು ನಿರ್ಬಂಧಗಳು ಇರುವುದು ಸಹಜ. ಇತ್ತೀಚಿಗಷ್ಟೇ gಥಿm ಸೇರಿದ್ದ ಇವಳು ಮನೆಯವರು ಮುಂದುವರಿಸುವುದು ಬೇಡ ಎಂದ ಮಾತ್ರಕ್ಕೆ ಈಗ ತನ್ನ ಮನೆಯಲ್ಲೇ ಫಿಟ್ನೆಸ್ ಜರ್ನಿಯನ್ನು ಪ್ರಾರಂಭಿಸಿರುವಳು. ಇವಳಿಗೆ ಸ್ನೇಹಿತರೊಂದಿಗೆ ದೂರ ಪ್ರಯಾಣದ ನಿರ್ಬಂಧಬಿದ್ದರೂ ಹೀಗೋ ಹೇಗೋ ತನ್ನ ಕುಟುಂಬದವರನ್ನು ಒಪ್ಪಿಸಿ ಸಂಪಾದಕ ಮಂಡಳಿಯ ಪ್ರವಾಸಕ್ಕೆ ಕೈ ಜೋಡಿಸಿದ್ದಳು. ಇದು ಚಾರ್ವಿ "ಜೀವನದ ಮೊದಲ ಪ್ರವಾಸ"ವಾಗಿರುವುದು ಕುತೂಹಲದ ಸಂಗತಿ. ಮೊದಲ ಪ್ರವಾಸಕ್ಕೆ ಬಂದ ಖುಷಿಯಲ್ಲಿ ಈಕೆ "Trip ಹೋಗ್ಬಿಟ್ಟೆ!" ಎಂದು ಇನ್ಸ್ಟಾಗ್ರಾಮ್ ಸ್ಟೋರಿ ಹೈಲೈಟ್ ಕೂಡ ಹಂಚಿಕೊAಡಿದ್ದಾಳೆ. ಮುಂದಿನ ಬಾರಿ ಕೂಡ Edboard Trip ತಪ್ಪದೆ ಬರುವಳೆಂದು ಭಾವಿಸುತ್ತೇನೆ... ತಪ್ಪಿಸಿದ್ದಲ್ಲಿ smile emoji :) ಚಾರ್ವಿಗೆ "Harry Potter" ಎಂದರೆ ಅಚ್ಚುಮೆಚ್ಚು. ಅಷ್ಟೇ ಅಲ್ಲ ಈಕೆ ಕಬ್ಬಡ್ಡಿ ಕ್ರೀಡೆಯ ಪಟ್ಟ ಅಭಿಮಾನಿ. ಪ್ರತಿ ಬಾರಿಯು "ಪ್ರೊ ಕಬಡ್ಡಿ" ಪಂದ್ಯಾವಳಿಯ ಯಾವುದೇ ಪಂದ್ಯವನ್ನು ತಪ್ಪದೆ ವೀಕ್ಷಿಸುತ್ತಾಳೆ. ಕಬ್ಬಡಿ ಪಂದ್ಯದ ಸಮಯದಲ್ಲಿ ಅದೇನೆ ಮುಖ್ಯ ಕೆಲಸವಿರಲಿ, ಉದಾಹರಣೆಗೆ ಅವಳು ಊಟ ಮಾಡುತ್ತಿದ್ದರೆ ತಟ್ಟೆಯಲ್ಲಿ ಏನಿದೆ ಎಂಬುದನ್ನು ಗಮನಿಸದೆ ಆಸಕ್ತಿಯಿಂದ ಪಂದ್ಯ ನೋಡಲು ಕುಳಿತುಬಿಡುತ್ತಾಳೆ!














