Karthik K

Karthik K

Khushi Khusi Aagiruve Endendigu Kake

V Sem, ECE

ವಿದ್ಯುನ್ಮಾನ ಮತ್ತು ಸಂವಹನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದ್ವಿತೀಯ ವರ್ಷದ ಈ ಕೋಲಾರದ ಹುಡುಗ ಸಂಪಾದಕ ಮಂಡಳಿಗೆ 'ಚಿನ್ನ'ದಂತೆ ಅಮೂಲ್ಯ ಎಂದರೆ ತಪ್ಪಾಗಲಾರದು. ವಿನಯ ಸ್ವಭಾವದವನಾಗಿದ್ದು, ತಾನಾಯಿತು ತನ್ನ ಕೆಲಸವಾಯಿತು ಎಂಬAತೆ ಎಲ್ಲ ಕೆಲಸಗಳನ್ನು ಚಾಚುತಪ್ಪದೆ ಶಿಸ್ತಿನಿಂದ ಹೆಚ್ಚು ಮಾತನಾಡದೆ ಮಾಡಿ ಮುಗಿಸುತ್ತಾನೆ. ಯಾರಾದರು ಏನನ್ನಾದರು ಮಾತನಾಡುತ್ತಿದ್ದರೆ ತಾಳ್ಮೆಯಿಂದ ಅದನ್ನು ಕೇಳಿಸಿಕೊಂಡು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಮುಂದಿಡುತ್ತಾನೆ. ಕಿರಿಯರಿಗೆ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತ, ಹಿರಿಯರಿಗೆ ತಗ್ಗಿ-ಬಗ್ಗಿ ನಡೆದು ಸಲೀಸಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಇವನಲ್ಲಿದೆ.

ಶಿಸ್ತಿನ ಸಿಪಾಯಿ ಆದ ಇವನು ತನ್ನ ಕೊಠಡಿಯನ್ನು ಸ್ವಚ್ಛ ಮತ್ತು ಚಂದವಾಗಿ ಇಟ್ಟುಕೊಂಡಿದ್ದು, ಇವನ ಕೊಠಡಿಯ ಫೋಟೋ ತೆಗೆದು ಹಾಸ್ಟೆಲ್ ಪ್ರಮೋಷನ್ ಮಾಡಬಹುದೆಂಬುದು ಗುಪ್ತಾಚಾರರ ಅಭಿಪ್ರಾಯವಾಗಿದೆ. ರಜೆ ದಿನಗಳು ಬಂತೆAದರೆ ಊರಿಗೆ ಹೋಗುವುದು ಇವನ ಲೆಕ್ಕದಲ್ಲಿ ವಾಡಿಕೆ ಆಗಿದ್ದರೂ, ಎಲ್ಲಾದರು ತಿರುಗಾಡಲು ಬೇರೆ ಸ್ಥಳಗಳಿಗೆ ಭೇಟಿ ನೀಡಿದರೆ ತನ್ನ ತಂಗಿಯನ್ನು ಮರೆಯದೆ ನೆನಪು ಮಾಡಿಕೊಂಡು ಅವಳಿಗೆ ಏನಾದರೊಂದು ತರುವ ರೂಢಿಯನ್ನು ಕೂಡ ಇಟ್ಟುಕೊಂಡಿದ್ದಾನೆ. ಸದಾಕಾಲ ಬಾಲ್ಯದಲ್ಲಿ ಜಗಳವಾಡುವ ಅಣ್ಣ-ತಂಗಿ, ಸಾಮಾನ್ಯವಾಗಿ ಕೊಠಡಿಯನ್ನು ಹರಡಿಕೊಂಡು ಇಟ್ಟುಕೊಳ್ಳುವ ಹುಡುಗರಿಗೆ ಹೋಲಿಸಿದರೆ ಇವನು ವಿಭಿನ್ನ ಮತ್ತು ಉತ್ತಮವಾಗಿ ಬೆಳೆದಿರುವುದು ಭಾಸವಾಗುತ್ತದೆ. ಇವನು ಆದರ್ಶ ಅಣ್ಣನಷ್ಟೇ ಅಲ್ಲದೆ ಶಿಕ್ಷಕರಿಗೆ ವಿಧೇಯ ವಿದ್ಯಾರ್ಥಿಯೆನಿಸಿಕೊಂಡು ಟಾಪರ್ ಆಗಿರುವುದು ಕೂಡ ಆಶ್ಚರ್ಯಕರ ಸಂಗತಿ.

ವಿವಿಧ ರೀತಿಯ ಸಂಗೀತ ಕೇಳುವುದರಲ್ಲಿ ಅಭಿರುಚಿ ಹೊಂದಿರುವ ಇವನು ಕರ್ನಾಟಕ ಸಂಗೀತವನ್ನು ಹಾಡಬಲ್ಲವನೂ ಆಗಿದ್ದಾನೆ ಎಂಬುದು ಶ್ಲಾಘನೀಯ ವಿಷಯವಾಗಿದೆ. ನಾಟಕಗಳನ್ನು ವೀಕ್ಷಿಸುವುದು ಕೂಡ ಇವನಿಗೆ ಖುಷಿ ಕೊಡುವ ಸಂಗತಿಯಾಗಿದೆ. ಬಿಡುವಿನ ವೇಳೆಯಲ್ಲಿ ನಿದ್ದೆ ಮಾಡಿ ತನ್ನ ದಿನನಿತ್ಯದ 'ನಿದ್ದೆಯ ಕೋಟಾ' ಮುಗಿಸಲು ಇಚ್ಛಿಸುವ ಇವನು ಆಗಾಗ ಕಥೆ ಪುಸ್ತಕಗಳನ್ನು ಓದುವವನೆಂದು ಹಾಸ್ಟೆಲ್ ಮೈಗಳ್ಳರಿಂದ ತಿಳಿದುಬಂದಿದೆ.

ಮಾAಸಾಹಾರ ಖಾದ್ಯಗಳನ್ನು ಇಷ್ಟಪಡುವುದಷ್ಟೇ ಅಲ್ಲದೆ ತನ್ನ ಕೈಚಳಕ ತೋರಿಸಿ ಈ ರೀತಿಯ ಖಾದ್ಯಗಳನ್ನು ತಯಾರಿಸಿ ಉಣಬಡಿಸುತ್ತಾನೆ. ಹಾಲಿನ ಉತ್ಪನ್ನಗಳಿಂದ ದೂರ ಉಳಿದು ವಿವಿಧ ರೀತಿಯ 'ಚಾಟ್ಸ್'ಗಳನ್ನು ಸವಿದು ಖುಷಿ ಪಡುತ್ತಾನೆ. ಬೆಳಗಿನ ಜಾವದಲ್ಲಿ ತಿಂಡಿಯನ್ನು ತಿನ್ನದೇ ಪ್ರೊಟೀನ್ ಶೇಕ್ ಕುಡಿದು ಶಕ್ತಿವಂತನಾಗಿದ್ದಾನೆ. ಕಲ್ಲಂಗಡಿ ಜ್ಯೂಸ್ ಎಂದರೆ ಇವನಿಗೆ ಬಹಳ ಇಷ್ಟ. ಹಾಸ್ಟೆಲ್ ಅಲ್ಲಿ ತನ್ನದೇ ಆದ ತೆಲುಗು ಗ್ಯಾಂಗ್ ಒಂದನ್ನು ಕಟ್ಟಿಕೊಂಡು ತೆಲುಗು ಮಾತಾಡಿ ನಿರಂತರ ಒಡನಾಟವನ್ನು ಇಟ್ಟುಕೊಂಡಿದ್ದಾನೆ. ಯಾರಾದರೂ ಹೇಳಿರುವ ಮಾತು ಮಜವೆನಿಸಿತೆಂದರೆ ಅದನ್ನು ಡೈಲಾಗ್ ಆಗಿ ಮಾರ್ಪಾಡು ಮಾಡಿ ಕಿuoಣe ಎಂದು ಎಲ್ಲರೊಡನೆ ಹಂಚಿಕೊಳ್ಳುತ್ತಾನೆ.

ಕಿರಿಯ ಮತ್ತು ಹಿರಿಯ ಸಂಪಾದಕರ ಜೊತೆ ಒಲುಮೆಯಿಂದ ವರ್ತಿಸುತ್ತಾ, ನಿಷ್ಠೆಯಿಂದ ತನ್ನ ಕೆಲಸ ಮಾಡುವವನ ಜೀವನವೂ ಕೂಡ ಬಂಗಾರವಾಗಲಿ ಎಂದು ಶುಭ ಹಾರೈಸುತ್ತೇನೆ


Character Stats
Geekiness
Introversion
Peching
Paapaness
Speciality
Man of his words

The Rest of the Crew

  • Pranav Karthik
  • Pranava Kulur
  • Shrijani G
  • Charvi S
  • Ananya K
  • Aditya Hegde
  • Tanya N
  • Surekha Y
  • Apoorva R Bhat
  • Karthik K
  • Poorvi M
  • Bindushree S
  • Meghashree S
  • Nidhi Hegde
  • Sarvajith S