Bindushree S
Boondi
V Sem, ECE
ಬಿಂದುಶ್ರೀ. ಮುಗುಳುನಗೆ ಮೆರೆವ ಮುದ್ದು ಮುಖದ ಮೈಸೂರಿನ ಹುಡುಗಿ ಮಂಡಳಿಯ ‘ಶ್ರೀ’ತ್ರಯರಲ್ಲೊಬಳು. ಎರಡನೇ ವರ್ಷದ ECE ವಿದ್ಯಾರ್ಥಿನಿಯಾದ ಇವಳಿಗೆ ಎದರುಗಡೆ ಮನೆಯಲ್ಲಿ ತನ್ನದೇ ವಿಭಾಗದ ಶಿಕ್ಷಕರು ಹೊಸದಾಗಿ ನಿವಾಸ ಹೂಡಿರುವುದು ಕೊಂಚ ಶಿರೋಬಾಧೆ ಮೂಡಿಸಿದೆ. ಹ್ಯಾಂಡ್ ಬ್ಯಾಗ್ ಹಿಡಿದು ಬೀದಿ ಸುತ್ತುತ್ತ ಶಾಪಿಂಗ್ ಮಾಡುವುದು ಇವಳ ಇಷ್ಟದ ಹವ್ಯಾಸವಂತೆ. ‘ಬ್ರಿಡ್ಜರ್ಟನ್’ನ ನಾಲ್ಕನೇ ಆವೃತ್ತಿ ಬಂದರೂ ಮೊದಲನೆಯ ಸೀಸನ್ ಜೋಡಿಯೇ ಇವಳಿಗೆ ಅಚ್ಚುಮೆಚ್ಚು. ಪ್ರೇಮಕಥೆ, ರೋಮಾಂಚಕ ಹಾಗೂ ಕೊಲೆ ರಹಸ್ಯಗಳ ಸಿನಿಮಾಗಳನ್ನು ನೋಡಲು ಈಕೆ ಉತ್ಸುಕಳು. ಸುಮಧುರವಾಗಿ ಹಾಡುವುದು ಇವಳಲ್ಲಿ ಅಡಗಿರುವ ಕಲೆ. ಹೊಸತನ್ನು ಕಲಿಯುವ ಕುತೂಹಲದಿಂದ ಕೂಡಿರುವ ಈ ಕಿನ್ನರಿಯ ಸೇರ್ಪಡೆಯಿಂದ ಸಂಪಾದಕ ಮಂಡಳಿಯ ಕಳೆ ಹೆಚ್ಚಿದೆ. ಇವಳ ಜೀವನವೆಂಬ ವಿದ್ಯುನ್ಮಂಡಲದಲ್ಲಿ ಯಾವದೇ ಪ್ರತಿರೋಧವಿಲ್ಲದೆ ಗರಿಷ್ಠ ಶಕ್ತಿ ದೊರೆಯಲಿ ಎಂದು ಆಶಿಸುತ್ತೇವೆ.
Character Stats
Geekiness
Introversion
Peching
Paapaness
Speciality
Makes crazy faces














