Pranava Kulur
Solopreneur Kulur
VII Sem, CSE
“ತರಿಕಿಟ-ತಕಧಿಮಿ-ತಕಜೊಣು” ಎಂಬ ಶಬ್ದ ಜೆಸಿಇ ಕಾಲೇಜಿನ ಆವರಣದಲ್ಲಿ ಕಿವಿಗೆ ಬಿತ್ತೆಂದರೆ ಕೂಳೂರಿನ ಕುವರನೊಬ್ಬ ನಿಮ್ಮ ಅಕ್ಕಪಕ್ಕದಲ್ಲೆಲ್ಲೋ ಸುಳಿದಾಡುತ್ತಿದ್ದಾನೆ ಎಂದರ್ಥ. ಗಣಕ ತಂತ್ರಜ್ಞಾನ ಅಭಿಯಂತರಣದ ಮೂರನೇ ವರ್ಷದಲ್ಲಿ ಉತ್ತೀರ್ಣನಾಗುತ್ತಿರುವ ಇವನು ‘ಪ್ರಣವ ನಾದ’ ಮೊಳಗಿಸುವುದರಲ್ಲೂ ಎತ್ತಿದಕೈ. ಕುಂಚವೊAದನ್ನು ಹಿಡಿದರೆ ಜೀವಂತ ಮುಖ ಚಿತ್ರಗಳನ್ನು ರಚಿಸಬಲ್ಲ ನಿಪುಣ. ಶಾಸ್ತ್ರೀಯ-ಪಾಶ್ಚಾತ್ಯ ಎನ್ನದೇ ಮೃದಂಗ, ಕ್ಲಾಪ್-ಬಾಕ್ಸ್ ಗಳನ್ನು ನುಡಿಸುತ್ತಾ ಗಾಯನಕ್ಕೊಂದು ಲಯ ಒದಗಿಸುವುದರಲ್ಲಿ ಪ್ರವೀಣ. ಇವನ ಕರಗಳಲ್ಲಿ ಸರಸ್ವತಿಯೇ ಕುಣಿಯುತ್ತಾಳೆಂದರೆ ತಪ್ಪಾಗಲಾರದು!
ಮಾತು ಬೆಳ್ಳಿ ಮೌನ ಬಂಗಾರವೆAಬುದನ್ನು ಅರಿತಿರುವ ಇವನು ಸರಿಯಾದ ಸಮಯ ಬಂದಾಗ ತನ್ನ ‘ಕೌಂಟರ್‘ ಅಸ್ತ್ರಗಳನ್ನು ಪ್ರಯೋಗಿಸುತ್ತಾನೆ. ಪ್ರಣವ ಮುಜುಗರ ಸ್ವಭಾವದ ಹುಡುಗನೆಂದು ಮೋಸಹೋಗದಿರಿ, ಸ್ವಲ್ಪ ಸಂಕೋಚ ಕಾಡಿಮೆಯಾಗುತ್ತಲೇ ನಿಮ್ಮ ಕಾಲೆಳೆವ ಕಾರ್ಯಕ್ಕೆ ತನ್ನನ್ನು ಸ್ವಯಂ ನೇಮಖಾತಿ ಮಾಡಿಕೊಳ್ಳುತ್ತಾನೆ. ಎಲ್ಲರನ್ನೂ ರೇಗಿಸುತ್ತಾ, ನಗಿಸುತ್ತಾ ಓಡಾಡುವ ಇವನು ಸ್ನೇಹಜೀವಿ. ಅದರಲ್ಲೂ ಮಂಗಳೂರಿನವರನ್ನು ಮೈಸೂರಿನಲ್ಲಿ ಕಂಡೊಡನೆ ಮುಖಾರವಿಂದದವು ಅರಳಿ ತುಳುವಿನಲ್ಲಿ ಮಾತುಕತೆಯ ಮುಂಗಾರಿನ ಸಿಂಚನ ಮೂಡಿಸುತ್ತಾನೆ. ಎದುರು ಸಿಕ್ಕಾಗ ‘ಎಂತದಾ’ ಎನ್ನುವ ಇವನು WhatsAppನಲ್ಲಿ ಸಂಭಾಷಣೆಗೆ ಸಿಗುವುದು ಅಷ್ಟೇ ಕಷ್ಟ. ಇವನನ್ನು ಸೀನ್ ಜೋನ್ ಸರದಾರ ಎಂದರೂ ತಪ್ಪಾಗಲಾರದು. ಹಾಗೂ ನೀವೇನಾದರೂ ಇವನನ್ನು ಸಂಪರ್ಕಿಸಬೇಕೆAದರೆ, ರಾತ್ರಿ ಹನ್ನೆರಡರ ನಂತರವAತೆ ಇವನ ಆನ್ಲೈನ್ ಹಾಜರಿ. ಪ್ರಕೃತಿಯ ಮೇಲೆ ಅಪಾರ ಒಲವು ಹೊಂದಿರುವ ಇವನು ತನ್ನ ತರಗತಿಯ ಪರಿಸರದಲ್ಲೂ ಪ್ರಿಯನಾಗಿದ್ದಾನೆ; ಕಾಲೇಜಿನ ಭದ್ರತಾ ಸಿಬ್ಬಂದಿಯೊAದಿಗೂ ನಂಟು ಬೆಳೆಸಿಕೊಂಡಿದ್ದಾನೆ. ಇವನ ಅನೌನ್ಸ್ಮೆಂಟ್ ನ ಧಾಟಿಯನ್ನು ಹಲವರು ಬಹಳ ಮೆಚ್ಚಿದ್ದಾರೆಂದು ನಮ್ಮ ಗುಪ್ತಾಚರರೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಾಯಶಃ ಮೈಸೂರಿಗೂ ಇವನೀಗ ಪೂರ್ಣವಾಗಿ ಒಗ್ಗಿಕೊಂಡಿದ್ದಾನೆ. ವಾರಾಂತ್ಯದಲ್ಲಿ ಸ್ಥಳೀಯರಂತೆಯೇ ಕುಕ್ಕರಹಳ್ಳಿಯ ಬಳಿ ಈತ ನೀರ್ ದೋಸೆ, ಮಸಾಲೆ ದೋಸೆಗಳನ್ನು ಸವಿಯುತ್ತಿರುವುದನ್ನು ಕಾಣಬಹುದು. ಗಲ್ಲಿಗಳಲ್ಲಿ ಗೆಳೆಯರೊಡನೆ ಸುತ್ತುತ್ತಾ, ಒಮ್ಮೊಮೆ ತಡರಾತ್ರಿಯೂ ಬೀದಿ ತಿರುಗುತ್ತಿರುತ್ತಾನೆ ಎಂದು ನಮಗೆ ದೆವ್ವಗಳು ವರದಿಸಿವೆ. ಮೊದಲೆರಡು ವರ್ಷಗಳಲ್ಲಿ ಸೈಕಲ್ ನಲ್ಲಿ ಸುಯ್ಯನೆ ಸುಳಿದಾಡುತ್ತಿದ್ದ ಇವನು ಕೈಗೆ ಸಿಗುವುದು ಕಷ್ಟವಾಗಿತ್ತು. ಇದೀಗ ಗಾಡಿ ಬಂದಮೇಲAತೂ ಪಿಜಿ, ಕಾಲೇಜು ಎಂದು ಗಾಳಿಯಂತೆ ಹರಿದಾಡುತ್ತಿರುರುವುದರಿಂದ, ಕಣ್ಣಿಗೆ ಬೀಳುವುದೂ ಕಷ್ಟವಾಗಿದೆ.
ಲಾರಾಸ್ ನಲ್ಲಿ ಚಾಯಿ, ರಜೆ ಬಂದೊಡನೆ ಮಂಗಳೂರು. ಇವು ಪ್ರಣವನ ಡಿಫಾಲ್ಟ್ ಆಯ್ಕೆಗಳು. ಆದರೆ ಸಾಹಸಮಯ ದಾರಿಯನ್ನು ಆಯ್ದುಕೊಳ್ಳಲು ಇವನು ಅಂಜುವುದಿಲ್ಲವAತೆ. ಮೀಟ್ ಒಂದಕ್ಕೆ ಸೀರೆಯುಟ್ಟು ಬಂದು ಹೆಣ್ಣುಮಕ್ಕಳ ಹೊಟ್ಟೆ ಉರಿಸಲೂ ತಯಾರಿದ್ದಾನಂತೆ. ತನ್ನ ಸ್ಟಿಕ್ಕರ್-ಮೀಮ್ ಗಳ ಸಂಖ್ಯೆ ಹೆಚ್ಚಲೆಂದು ವಿವಿಧ ಪೋಸುಗಳನ್ನೂ ನೀಡಬಲ್ಲ. ಎಲ್ಲರೂ ಆಶ್ಚರ್ಯಚಕಿತರಾಗುವಂತೆ ಈಚಿ೯sಟಚಿ ಹಾಡಿಗೆ ಹೆಜ್ಜೆ ಹಾಕಬಲ್ಲ ನರ್ತಕನೂ ಹೌದು. ಇವನಲ್ಲಿ ಅಡಗಿರುವ ಮತ್ತಷ್ಟು ಕಲೆಗಳಿಗೆ ವೀಕ್ಷಕರಾಗಲು ನಾವು ಕಾತುರರಿದ್ದೇವೆ.
ಮಂಡಳಿಯಲ್ಲಿ ಇಬ್ಬರು ಪ್ರಣವರೆಂಬ ಕಾರಣ ಇವನು ಕೂಳೂರು ಎಂದೇ ಕರೆಯಲ್ಪಡುತ್ತಾನೆ. ಪಾದರಸದಂತೆ ಕೆಲಸ ನಿರ್ವಹಿಸುವ ಇವನನ್ನು ತಂಡದ ಧ್ವನಿವರ್ಧಕ ಎನ್ನಬಹುದು. ನಮ್ಮೆಲ್ಲಾ ಕಾಯಕ್ರಮಗಳಲ್ಲೂ ಮೈಕ್-ಸ್ಪೀಕರ್ಗಳು ಎಂದೊಡನೆ ಬರುವ ಹೆಸರು ಇವನದು. ಸಂಪಾದಕ ಮಂಡಳಿಯ ಈ ಅಪ್ರತಿಮ ಪ್ರತಿಭೆ ‘ನಾದ’ ತಂಡವನ್ನು ಮುನ್ನಡೆಸುತ್ತಿದ್ದಾನೆ ಎಂಬುದು ನಮಗೆ ಹೆಮ್ಮೆಯ ಸಂಗತಿ. ಎರಡೂ ತಂಡಗಳ ಕೆಲಸಗಳನ್ನು ಸಮಾಧಾನದಿಂದ ತೂಗಿಸಿಕೊಂಡು ಸಂಭಾಳಿಸುತ್ತಿರುವುದು ಶ್ಲಾಘನೀಯ. ತನ್ನ ಜವಾಬ್ದಾರಿಯುತ ಕಾರ್ಯನಿರ್ವಹಣೆಯಿಂದ ಹಿಡಿದು ಹಿರಿಯರಿಗೆ ಗೌರವ ನೀಡುತ್ತಾ, ಕಿರಿಯರನ್ನು ಮಮತೆಯಿಂದ ಕಾಣುತ್ತಾ ಎಲ್ಲರ ಪ್ರೀತಿಯನ್ನು ಸಂಪಾದಿಸಿದ್ದಾನೆ.














