Vijeth Vaishnav D.
#icanunderstand
Graduated, CSE
<Random Vijeth Quotes in the middle to break the flow, because Vijeth likes going with the flow.>
"ಈಗ ಈ ಫಾರ್ಮ್ ಇಂದ ರೆಸ್ಪಾನ್ಸಸ್ ಈ ಫೋಲ್ಡರ್ಗೆ ಬಂದು ಕೂರುತ್ತೆ, ಆಮೇಲೆ..." ಎಂದು ಒಂದೇ ಉಸಿರಿನಲ್ಲಿ ಎಕ್ಸಪ್ಲೇನ್ ಮಾಡ್ತಿರುವಾಗ, ಹಿಂದೆ ಸುಮಾರು ವಾಹನಗಳ ಓಡಾಟದ ಸದ್ದು, ಹಾರ್ನ್ ಸದ್ದು. "ಎಲ್ಲಿದ್ಯೊ ವಿಜೇತ್?" "ಅಯ್ಯೊ ತಂಗಿನ ಡ್ರಾಪ್ ಮಾಡೋಕೆ ಹೋಗಿದ್ದೆ. ಈಗ ಗಾಡಿ ಓಡಸ್ತಾ ಇದ್ದೀನಿ". ಇದು ನಮ್ಮ ವಿಜೇತ್ Punctual, Responsible ದೊಡ್ಡಪ್ಪ. ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕನಾಗುವ ಮೊದಲೇ, ಚಿಕ್ಕವರಿಗಿರಲಿ ದೊಡ್ಡವರಿಗಿರಲು, ಎಲ್ಲರಿಗೂ ಅವನೇ ದೊಡ್ಡಪ್ಪ. ಈಗೀಗ ದೊಡ್ಡಜ್ಜನಾಗಿ ಮಾರ್ಪಾಡಾಗುತ್ತಿದ್ದಾನೆ.
“Don’t try to be special for someone. Be unique, so you will be special for all”
ಚರ್ಚಾಸ್ಪರ್ಧೆಯಾಗಲಿ ಭಾಷಣ ಸ್ಪರ್ಧೆಯಾಗಲಿ ಭಾಗವಹಿಸಿದನೆಂದರೆ ಈ ವಿಜೇತನು ವಿಜೇತನಾಗಿಯೇ ಬರುವನು. ಪಟ್ ಅಂತ ಹೋಗಿ ಮಾತನಾಡಿ, ಪಟ್ ಅಂತ ಬಹುಮಾನ ತಗೊಂಡು ಬರುವನು. ಸ್ಪರ್ಧೆಗಳಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲೂ, ಅವನು ಹಿಡಿದುಕೊಳ್ಳುವ ಪಾಯಿಂಟ್ಗಳು ಬಹಳ ಸ್ಮಾರ್ಟ್ ಆಗಿರುತ್ತವೆ. ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಎಲ್ಲರಿಗೂ ತಿಳಿಸಿ, ಮನವರಿಕೆ ಮಾಡುವನು. ಎಲ್ಲಾ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಗೆಹರಿಸುವ ಚಾಣಾಕ್ಷ. ದೊಡ್ಡಪ್ಪನ ಬಳಿ ಹೋದರೆ ಆ ಸಮಸ್ಯೆ ಬಗೆಹರಿತೆಂದೇ ಅರ್ಥ. ಎಲ್ಲರಿಗೂ ಉತ್ತಮ ಮಾರ್ಗದರ್ಶಿಯಾಗಿರುವ ಇವನು, ಯಾರು ಯಾವ ಸಮಯದಲ್ಲಿ ಬಂದು ಸಹಾಯ ಕೇಳಿದರೂ ಇಲ್ಲ ಅನ್ನೋಲ್ಲ.
“Your brain should process everything which is beneficial to you. You should have smart firewalls to block all negativity from entering your brain.”
ಕಲ್ಲನ್ನೂ ಮಾತನಾಡಿಸುವ ವ್ಯಕ್ತಿತ್ವವನ್ನು ಹೊಂದಿರುವ ಇವನು 'ಹಾಯ್, ಹಲೋ, ಹೇಗಿದ್ದೀರಿ?'ಗೆ ಕಾನ್ವರ್ಸೆಶನ್ ನಿಲ್ಲಿಸುವುದೇ ಇಲ್ಲ. ಹೋಗೋರು ಬರೋರು ಎಲ್ಲರೂ ಇವನಿಗೆ ಗೆಳೆಯರೇ. ಬರಿ ಅಷ್ಟೇ ಅಲ್ಲ, ಬಜ್ಜಿ-ಬೋಂಡಾ ಮಾರುವವರ ಬಳಿ ಕೂಡ ಅಪ್ಯಾಯಮಾನವಾಗಿ ಮಾತನಾಡಿಸಿ, ಅವರ ಸ್ನೇಹವನ್ನು ಸಂಪಾದಿಸುವ ಸ್ನೇಹಜೀವಿ. ಅದರಲ್ಲೂ ಮಂಡಳಿಯ ಸದಸ್ಯರೆಂದರೆ ಅಚ್ಚುಮೆಚ್ಚು. ಸರಿರಾತ್ರಿ ಮೂರು ಗಂಟೆಗೆ "ಇದಕ್ಕೆ ಪರಿಹಾರ ಕೊಡೊ" ಎಂದು ಕೇಳಿದರೆ ಸಾಕು, ಅದಕ್ಕೆ ಸನ್ಮಾರ್ಗ ತೋರಿಸಿಯೇ ಅವರನ್ನು ನಿದ್ದೆಗೆ ಕಳಿಸುವನು. ಪಾಪ ಏನು ಅಷ್ಟು ಹೊತ್ತಿನಲ್ಲಿ ಎಬ್ಬಿಸಿ ಇವನನ್ನು ಹಿಂಸಿಸುವರಲ್ಲಾ ಎಂದು ಅಂದುಕೊಳ್ಳಬೇಡಿ. ಈತ ಮಲಗೋದೇ ಬ್ರಾಹ್ಮಿ ಮುಹೂರ್ತದಲ್ಲಿ. ಮಂಡಳಿಯ (ಈಗ ಹೆವಿ ಫಾಲೋಯಿಂಗ್ ಪಡೆದುಕೊಂಡಿರುವ) 'ನಿಶಾಚರಿಗಳ ಸಂಘದ' ಅಧ್ಯಕ್ಷ. ಯಾವಾಗಲೂ ಏನಾದರೂ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವನು. ಒಟ್ಟಿಗೆ ಹಲವಾರು ಕಾರ್ಯಗಳನ್ನು ಅಚ್ಚುಕಟ್ಟಾಗಿ ಮುಗಿಸಬಲ್ಲ ಮಲ್ಟಿ ಟಾಸ್ಕರ್. ಕಿಖ ಅoಜeಗಳೆಂದರೆ ಪ್ರಾಣ ಎನ್ನುವ ಈತನು, ಲೆಕ್ಚರರ್ಸ್ನ ಬಲಗೈ ಬಂಟ. ಸಿಕ್ಕಸಿಕ್ಕಲಾಗಲೆಲ್ಲಾ ಅS ವಿಷಯಗಳ ಬಗ್ಗೆ geeky jokes ಹೇಳುತ್ತಾ, ವಿಷಯವನ್ನು ಸೊಗಸಾಗಿ ವರ್ಣಿಸಲು ಪ್ರಯತ್ನಿಸುತ್ತಾನೆ.
“Anything and everything for the board”
ಹೀಗೆ ಹೇಳುತ್ತಾ ಹೇಳುತ್ತಾ, ತನ್ನೊಳಗಿನ ಹಾಗು ಮಂಡಳಿಯ ಸದಸ್ಯರೊಳಗಿನ ಹುಮ್ಮಸ್ಸನ್ನು ಬಡಿದೆಬ್ಬಿಸುವ ಈತನು, ಅದೇಷ್ಟೋ ಜನರಿಗೆ ಸ್ಫೂರ್ತಿ. ಯಾವುದಕ್ಕೂ ಎದೆಗುಂದದೆ, ಎಲ್ಲಾ ಸಂದರ್ಭಗಳನ್ನು ಸಕಾರಾತ್ಮಕ ಮನಸ್ಥಿತಿಯಿಂದ ನಿಭಾಯಿಸುವ, ಜವಾಬ್ದಾರಿಯುತ chiff.
"ನಾನು ಯಾವಾಗಲೂ ಸೋಲುತ್ತಿರುವ ತಂಡದ ಪರ ಆಟವನ್ನು ಆಡುವೆ" "ಯಾಕೋ" "ಅರ್ರೇ, ನಾನು ಅವರನ್ನ ಗೆಲ್ಸ್ತೀನಿ ಅನ್ನೊ ನಂಬಿಕೆಯಿದೆ" ಎನ್ನುವ ಜೀವಿ. ತಾನು ಮಾಡುವ ಎಲ್ಲಾ ಕೆಲಸವು ಬಹಳ ಅಚ್ಚುಕಟ್ಟಾಗಿ ಹಾಗು ಆರ್ಗನೈಸ್ಡ್ ಆಗೇ ಇರಬೇಕೆಂದು ಬಯಸುವ ಈತನು, ಎಲ್ಲಾದನ್ನು ಮೊದಲೇ ಪ್ಲಾನ್ ಮಾಡಿ ಕುಳಿತುಕೊಳ್ಳುತ್ತಾನೆ. (ಕೆಲುವೊಮ್ಮೆ Gantt Chart ಕೆಲಸ ಮಾಡಿದ್ದೂ ಉಂಟು). ದೊಡ್ಡ ಕಾರ್ಯಕ್ರಮವೊಂದರ ಸಮಯದಲ್ಲಿ, ಬೆನ್ನು ಊಷ್ಟ್ ಆಗಿದ್ರೂ, ಜಿಗಿ-ಜಿಗಿ ಅಂತ ಕುರ್ತಾ ಹಾಕಿಕೊಂಡು ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಲು ಬಂದ ಕ್ರಿಯಾಶೀಲ ಹುಡುಗ.
ಶಬ್ದ್ಗಾಗಿ ರಚಿಸಿದ ಒಂದು ಪೋಸ್ಟರ್ ಇಂದ ಡಿಜಿಟಲ್ ಆರ್ಟ್ನಲ್ಲಿ ನಿಪುಣನಾದವನು ಇವನು. ಅನಿಮೇಷನ್ ಮಾಡೋದನ್ನ ಕಲಿತು, ಗೆರೆಗಳಿಂದ ಮಾಡಿದ ಮನುಷ್ಯನನ್ನು ಎಡದಿಂದ ಬಲಕ್ಕೆ ಚಲಿಸಿಸಿದವನು. ಇತ್ತೀಚೆಗಷ್ಟೆ ಈತ ಪಾಕಪ್ರವೀಣನಾಗಿದ್ದಾನೆ. ಎಲೆಕ್ಟ್ರಿಕ್ ಕುಕ್ಕರ್ನಲ್ಲಿ ಒಂದು ಮುಷ್ಠಿ ಅಕ್ಕೆಯನ್ನು ಬೇಯಿಸಿ ಅನ್ನ ಮಾಡಿ, ದೊಡ್ಡ ಸಾಧನೆಗೆ ಪಾತ್ರನಾಗಿದ್ದಾನೆ. ಭವಿಷ್ಯದಲ್ಲಿ ಪಾಯಸವನ್ನು ತಯಾರಿಸಿ ಎಲ್ಲರಿಗು ಉಣಬಡಿಸುವನೆಂದು ಭರವಸೆ ನೀಡಿದ್ದಾನೆ. (ತಾಯಿ, ಜಗದ್ಜನನಿ 🙏🏻)
“Your responsibility should not speak. Your personality should. “
ಈತನ ಬಗ್ಗೆ ಎಷ್ಟೇ ಬಗೆದರೂ, ಮೊಗೆದರೂ, ಇವನ ಕ್ರಿಯಾಶೀಲತೆಯ ಗುಣಗಾನ ಮುಗಿಯದು (We are trying to optimise our data mining algorithm). ಈ ಸಂಪೂರ್ಣ ವರ್ಷವು ಈತನ ನಾಯಕತ್ವದಿಂದ, ಈತನ ಉಪಸ್ಥಿತಿಯಿಂದ ಎಲ್ಲರಿಗು ಒಂದು ವಿಶೇಷವಾದ, ಅಮೋಘವಾದ, ಸಕಾರಾತ್ಮಕವಾದ ಕಲಿಕಾ ಅನುಭವವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ವಿಜೇತು ಯಾವಾಗಲೂ ವಿಜೇತನಾಗಿಯೇ ಇರಲಿ ಎಂದು ಬಯಸುತ್ತೇನೆ. ಜೀವನದುದ್ದಕ್ಕೂ ಶ್ರೇಯಸ್ಸು ಸಿಗಲಿ, ಎಂದೆAದಿಗೂ ವಿಜೇಯಿಯಾಗಲಿ, ಸಿರಿವಂತನಾಗಿರಲಿ.
ವಿ. ಸೂ: ಬೇಗ ದೃಷ್ಟಿ ತೆಗಸ್ಕೊ.











































