Harsha Bhat

Harsha Bhat

Bambaiii

Graduated, CSBS

ಈ ಪುಟದ ನಿರ್ಮಾಣದಲ್ಲಿ ಕಂಡು ಬರುವ ಎಲ್ಲಾ ಹೆಸರು ಪಾತ್ರ ಹಾಗು ಘಟನೆಗಳು ಸಂಪೂರ್ಣವಾಗಿ ಅಕಾಲ್ಪನಿಕ. ಈ ಪುಟದಲ್ಲಿ ಯಾವುದೇ ಪ್ರಾಣಿಯ ಹಾನಿಯಾಗಿಲ್ಲ. ಆದರೆ ಚಿಕ್ಕ ಮಕ್ಕಳ ಬಗ್ಗೆ ಅರುಚಿ ಪ್ರಕಟವಾಗಿರಬಹುದು.

ಪಶ್ಚಿಮ ಘಟ್ಟಗಳ ಅಪ್ಪುಗೆಯಲ್ಲಿ, ಪ್ರಕೃತಿಯ ಮಡಿಲಲ್ಲಿ, ಭೋರ್ಗರೆಯುವ ಜಲಪಾತದಲ್ಲಿ, ಭೂಮಿಯು ನೀರು ಕುಡಿದು ಸಂತೃಪ್ತಳಾಗಿ ಸುವಾಸನೆ ಸೂಸುವ ಸಿದ್ದಾಪುರದಲ್ಲಿನ ಒಂದು ವಿಶಾಲ ಮನೆಯಲ್ಲಿ ಕುಳಿತಿರುವ ಈತನ ಸುತ್ತಲು ಬೆಕ್ಕುಗಳೋ ಬೆಕ್ಕುಗಳು. ಒಂದು ಕೈಯಲ್ಲಿ ಟೀ ಹೀರುತ್ತಾ ಇದ್ದು, ಮತ್ತೊಂದು ಕೈಯಲ್ಲಿ ಬೆಕ್ಕುಗಳಿಗೆ ಚಪಾತಿ ತಿನಿಸುತ್ತಾ ಕುಳಿತಿರುವನು. ಕತ್ತೆತ್ತಿ ನೋಡುವನು- ಉದ್ದ ಇರುವ ಕಣ್ಣು ರೆಪ್ಪೆಗಳನ್ನು ಮೆಟುಕಿಸುತ್ತಾ, ಅವನ ಕಂದು ನೇತ್ರಗಳು ನಿಮ್ಮನ್ನು ದೃಷ್ಟಿಸುವವು...

*ಅರಿಜೀತ್ ಸಿಂಘ್‌ನ ಹಾಡು ಜೋರಾಗಿ ಹಿನ್ನಲೆಯಲ್ಲಿ ಪ್ಲೇ ಆಗುವುದು*

ಹೆಸರು ಹರ್ಷ. ಕೇಳಿದ್ದ ಕೂಡಲೇ ಈ ಹೆಸರು 'mosಣ ಛಿಟiಛಿh್ವ ಟಿಚಿme' ಎಂದೇ ಅನಿಸುತ್ತದೆ. ಅಪ್ಪೆಹುಳಿ ಹಾಗು ಅಡಿಕೆ ಕೋಯ್ಲ ಮಧ್ಯದಲ್ಲಿ ಬೆಳೆದಿರೋ ಮಲೆನಾಡ ಮಾಣಿ. ರಾಜ್ಯಮಟ್ಟದ ಯೋಗಾಪಟುವಾದ ಇವನು ರಬ್ಬರ್‌ನಂತೆ ಸಿಕ್ಕಸಿಕ್ಕ ದಿಕ್ಕಿನಲ್ಲಿ ತನ್ನ ದೇಹವನ್ನು ಬೆಂಡ್ ಮಾಡಬಲ್ಲ. ಇವನ ದಿನ ಆರಂಭಗೊಳ್ಳುವುದೇ ಸೂರ್ಯ ನೆತ್ತಿಯ ಮೇಲೆ ಬಂದು ನಿಂತಾಗ. ಬೆಳಗಿನ ಜಾವ ೪ಕ್ಕೆ ಮೆಸೇಜ್ ಮಾಡಿದರೂ ಒಂದು ಕ್ಷಣದಲ್ಲೇ ಪಟ್ ಎಂದು ರಿಪ್ಲೈ ವಾಪಸ್ ಬರುವುದು. ತನ್ನ ಊರಿನ ಜಿಟಿ-ಜಿಟಿ ಮಳೆಯನ್ನು ಎಂಜಾಯ್ ಮಾಡಿದ ನಂತರ ಬಯಲು ಸೀಮೆಯನ್ನು ವಿಚಾರಿಸಲು ಮೈಸೂರಿಗೆ ಬಂದಿಳಿದ. ಬಂದವನೇ ಸಂಪಾದಕ ಮಂಡಳಿಯ ಈ ಪುಟ್ಟ ಪರಿವಾರವನ್ನು ಸೇರಿದ.

ಈತ ಬೋರ್ಡ್ನ 'Pooರಿಚಿ Pಚಿಚಿಣh ಠಿeಡಿsoಟಿ'. ದೇವರ ಮೇಲೆ ಅಪಾರ ಭಕ್ತಿ ಹೊಂದಿರುವ ಇವನು ಎಡಬಿಡದೆ ಪೂಜೆ ಪುನಸ್ಕಾರ ಮಾಡಿಕೊಂಡು ಇರುವನು. ಪೂಜೆಯಲ್ಲಿ ತಲ್ಲೀನಗೊಂಡು ಹಲವಾರು ಬೋರ್ಡ್ ಮೀಟ್ ಇತ್ಯಾದಿಗಳಿಗೆ ತಡವಾಗಿ ಬಂದಿರುವ ಸಂದರ್ಭಗಳೂ ಇವೆ. ಯಾವಾಗಲೂ "ಕೇದಾರ್ನಾಥ್ ಜಾನಾ ಹೇ, ಬೇ" ಎಂದು ಹೇಳುತ್ತಾ ಕೇದಾರದ ಆ ಈಶ್ವರ ದೇಗುಲ, ಮಂಜು ಕಟ್ಟಿದ ಶಿಖರಗಳ ಬಗ್ಗೆ ಕನಸು ಕಾಣುತ್ತಿರುವನು. (ಇವನ ಈ ಕನಸು ಆದಷ್ಟು ಬೇಗ ನನಸಾಗಲಿ ಎಂದು, ಜೋಪಾನವಾಗಿ ಕೇದಾರಕ್ಕೆ ಹೋಗಿ ಆ ಯೋಗಿಯ ದರ್ಶನ ಸಿಗಲಿ ಎಂದು ಆಶಿಸುವೆ.)

ಇದನ್ನೆಲ್ಲಾ ಓದಿ 'ಏನಪ್ಪಾ ಇದು, ಏನು ಇವನು ವೈರಾಗಿನೇ?' ಎಂದು ಅಂದುಕೊಳ್ಳಬೇಡಿ. ಇವನನ್ನು ಮೀರಿಸುವ ಭೋಗಿ (ಶೋಕಿಲಾಲಾ ಎಂದು ಓದತಕ್ಕದ್ದು) ಯಾರು ಇರಲಿಕ್ಕಿಲ್ಲವೇನೋ. ಇವನ ಸ್ವೆಟ್‌ಶರ್ಟ್ ಕಲೆಕ್ಷನ್ ನೋಡಿ ಅದೆಷ್ಟು ಜನ ಉರ್ಕೊಂಡಿದಾರೋ. (ಅದರಲ್ಲಿ ನಾನೂ ಒಬ್ಬಳು) ಇವನ ಶೂಸ್‌ಗಳೆಲ್ಲವೂ ಆದಿಯ ದಾಸನಿಂದಲೇ ಬಂದು, ಅದರ ಬೆಲೆ ಕನಿಷ್ಠ ಐದು ಅಂಕಿಗಳಿರುವ ಸಂಖ್ಯೆಯಿAದ ಪ್ರಾರಂಭವಾಗುವುದು. ಆ ಮೆಟ್ಟುಗಳ ಮೇಲೆ ಅದ್ಯಾರ ದೃಷ್ಟಿ ಬಿದ್ದಿತ್ತೋ ಏನೋ, ಎರಡು ಜೊತೆ ಈಗಾಗಲೇ ಹಾಸ್ಟೆಲ್‌ನಲ್ಲಿ ಕಾಣೆಯಾಗಿವೆ. ಆದರೂ ಕೂಡ ಮತ್ತೆ ಅಷ್ಟೇ ಬೆಲೆ ಬಾಳುವ ಶೂಗಳನ್ನು ಕೊಂಡುಕೊಳ್ಳುವ ಆಸಾಮಿ. ಬಂಬೈಯಲ್ಲಿರುವ ತನ್ನ ಅಕ್ಕಾಳಿಂದ ನವೀನ ರೀತಿಯ ರಿಪ್ಪ್ಡ್ ಜೀನ್ಸ್ ಪಾರ್ಸೆಲ್ ಆಗಿ ಬರುವುದು. ಎಂದೂ ಸುಕ್ಕುಗಟ್ಟಿದ ಬಟ್ಟೆಯ ಧರಿಸದ ಈತನು, ಬಹಳ ಚೂಸಿ. ಎಲ್ಲವನ್ನು ಹಾಗೆ ಇಷ್ಟಪಡದ ಈತನನ್ನು ಇಂಪ್ರೆಸ್ ಮಾಡುವುದು ಬಹಳ ಕಷ್ಟ.

ಇವನು ಹೊರಗಿನ ಉಡುಪಿನ ಮೇಲೆ ಅಷ್ಟೇ ಗಮನ ಕೊಡದೆ ತನ್ನ ಮುಖದ ಹಾಗೂ ದೇಹದ ಸೌಂದರ್ಯವನ್ನೂ ವೃದ್ಧಿಸುವ ಕಡೆಗೆ ಕಾರ್ಯನಿರತನಾಗುವನು. ಕಾಫಿ ಪುಡಿ ಹಾಗು ಅರಿಶಿಣದ ಲೇಪವನ್ನು ಇವನ ಮುಖದ ಮೇಲೆ ಅದು ಹೇಗೆ ಜಾದೂ ಮಾಡುವುದೊ ನಾ ಕಾಣೆ. ಪ್ರತಿ ವಾರ ಈ 'exಜಿoಟiಚಿಣiಟಿg sಛಿuಡಿb' ಇಂದ ತನ್ನ ಮುಖವನ್ನು ತಿಕ್ಕಿ ತೀಡುವನು. 'ವಾವ್' ಬ್ರಾಂಡ್‌ನ ಕ್ರಾಂತಿವರ್ಧಕ ಪದಾರ್ಥಗಳನ್ನು ಪ್ರತಿದಿನ ಹಚ್ಚಿಕೊಂಡು ತನ್ನ 'seಟಜಿ ಛಿಚಿಡಿe' ಮಾಡಿಕೊಳ್ಳುವ ಇವನು ಬೋರ್ಡ್ನ 'mಚಿಣeಡಿiಚಿಟ gತಿoಡಿಟ' ಇಷ್ಟೆಲ್ಲಾ ಕಷ್ಟಪಟ್ಟು ಕಾಪಾಡಿಕೊಳ್ಳಲು ಈ ನಮ್ಮ ಛಿhoಛಿoಟಚಿಣe boiನ ಮುಖ ಯಾರಿಗೆ ತಾನೇ ಹಿಡಿಸದು, ಹೇಳಿ? ಆದ್ದರಿಂದಲೇ ಪ್ರತಿ ಬಾರಿಯ ಮುಖ ವರ್ಣಿಕೆ ಸ್ಪರ್ಧೆಯಲ್ಲಿ ಇವನ ಮುಖದ ಮೇಲೆ ಖಾಯಂ ಆಗಿ ಬಣ್ಣಗಳನ್ನು ಬೀಳಿಸಿಕೊಂಡು ಚಿತ್ರಕಾರರಿಗೆ ಒಂದೊಳ್ಳೆಯ ಕ್ಯಾನ್ವಾಸ್ ಆಗುವನು.
ಮಂಡಳಿಯ ಹಲವಾರು ಸದಸ್ಯರಿಗೆ ಇವನ ಹೇರ್‌ಕಟ್ ಕೂಲ್ ಎಂದೆನಿಸಿದೆಯAತೆ. ಅದು ಆಗಬೇಕಾಗಿದ್ದೇ ಬಿಡಿ. ಅವನ ಆ ಕೇಶರಾಶಿಗೆ ಮನ ಸೋಲದವರೇ ಇಲ್ಲ. ನಯ ಹಾಗೂ ನುಣುಪಾದ ಅವನ ಮಾರುದ್ದ ಕೂದಲನ್ನು ಹಿಡಿದಿಡಲು ಒಂದು ಸುರಳಿ ಕಟ್ಟಿದ ಹೆಡ್‌ಬ್ಯಾಂಡ್ ಬೇರೆ. ಎಲ್ಲರೂ ಗಮನಿಸಲಿ ಎಂದು ಆಗಾಗ ಅದನ್ನು ತೆಗೆದು ಹಾಕಿ ಮಾಡುವನು.

ಪ್ರತಿ ವರ್ಷ ಈ ಲೇಖನದಲ್ಲಿ ಈತನಿಗಿರುವ ಪ್ರಾಣಿಗಳ ಮೇಲಿನ ಪ್ರೇಮದ ಬಗ್ಗೆ ಚರ್ಚೆ ನಡೆಯುತ್ತಲೇ ಬಂದಿದೆ. ವರ್ಷಗಳು ಕಳೆದಂತೆ ಇವನ ಪ್ರೀತಿ ಹೆಚ್ಚುತ್ತಲೇ ಇದೆ. ತನ್ನ ನಾಯಿ 'ರೂಬಿ'ಯೊಡನೆ ಶಿರಸಿಯ ಬೆಟ್ಟಗಳಲ್ಲಿ ಚಾರಣಕ್ಕೆ ಹೋಗುತ್ತಾನೆ. ನಾಯಿಗಳ ಮಧ್ಯೆ ತಾರತಮ್ಯ ಮಾಡದೆ ಎಲ್ಲಾ ನಾಯಿಗಳನ್ನು ಸಮವಾಗಿ ಪ್ರೀತಿಸುವನು. ಏನೇ ಕೆಲಸ ಮಾಡುತ್ತಿದ್ದರು, ನಾಯಿಯನ್ನು ಕಂಡೊಡನೆ ಅದನ್ನು ನಿಲ್ಲಿಸಿ, ಮುದ್ದು ಮಾಡಿ, ಆಟವಾಡುವನು. ಮಂಡಳಿಯಲ್ಲಿ ಶ್ವಾನಕ್ಕೆ ಹೆದರುವ ಅನೇಕರು ಇದ್ದು, ಅವರನ್ನೂ ಬಿಡದೆ ಅವರಿಂದ ನಾಯಿಯ ತಲೆಯನ್ನಾದರೂ ಸವರಿಸಿ ಕಳುಹಿಸುವನು.
ಆದರೆ ಅವನಿಗೆ ಮಕ್ಕಳೆಂದರೆ ಎಲ್ಲಿಲ್ಲದ ಕೋಪ ಹತ್ತುವುದು. ಎಲ್ಲಾ ವಯಸ್ಸಿನ ಮಕ್ಕಳನ್ನು ದ್ವೇಷಿಸುವ ಈತನು ಅವರು ಮಾಡುವ (ಕೋಪತರಿಸುವ) ಪೆದ್ದ-ಪೆದ್ದ ಕೆಲಸಗಳ, ಚೇಷ್ಟೇಗಳ ರೀಲ್‌ಗಳನ್ನು ಹಂಚುತ್ತಾ ಜಾಗೃತಿಯನ್ನು ಮೂಡಿಸುವನು. ಅವನ ಈ ಸಿದ್ಧಾಂತವನ್ನು ಅರೆತು ಮಂಡಳಿಯ ಅನೇಕರು ಅವನ ಸಂಘವನ್ನು ಸೇರಿರುವರು. ನಮಸ್ಕಾರ ಮಾಡುತ್ತಿರುವೆ ಎಮೋಜಿ

ಏನೇ ಇರಲಿ, ಹರ್ಷ ಇಲ್ಲದೆ ಬೋರ್ಡ್ ಪೂರ್ಣವಾಗುತ್ತಿರಲಿಲ್ಲವೇನೋ. (ಮೊದಲನೇಯ ವರ್ಷದಿಂದ ಹಿಡಿದು ಈಗಿನವರೆಗೂ ಗೋಳ್ಹೊಯ್ಕೊಳ್ಳುವ ಈತನ ಬಗ್ಗೆ ಕರುಣೆ ತೋರಿಸಿ ಒಂದೆರಡು ಒಳ್ಳೆ ಮಾತುಗಳನ್ನಾಡಿಬಿಡೋಣವೆಂದು.) ಯಾವುದಾದರೂ ವಿಷಯದ ಬಗ್ಗೆ ಚರ್ಚಿಸುವಾಗ ತರ್ಕಬದ್ಧ ಪಾಯಿಂಟ್‌ಗಳನ್ನು ನೀಡಿ ಬೋರ್ಡ್ನ ಅತ್ಯಮೂಲ್ಯ ಸಂಪನ್ಮೂಲವೇ ಆಗಿರುವನು. ಈ ಸಾಲುಗಳನ್ನು ಬರೆಯುತ್ತಾ ಇದ್ದಂತೆ- ಒಟ್ಟಿಗೆ ಕಾಲೇಜಿನಲ್ಲಿ ಚಿಟಿಟಿouಟಿಛಿemeಟಿಣsಗೆ ಹೋಗಿದ್ದು, ಕೂತು ಲೇಖನಗಳನ್ನು ಬರೆದದ್ದು, ಗಂಟುಗಟ್ಟಲೆ ಗಾಸಿಪ್ ಮಾಡಿಕೊಂಡು ಕೂತಿದ್ದ ಆ ಕ್ಷಣಗಳು, (ಅಂದ್ಹಾಗೆ ಹರ್ಷ ಬೋರ್ಡ್ನ ಗಾಸಿಪ್ ಕ್ವೀನ್, ಹೇಳೋದು ಮರೆತೋಗಿತ್ತು) ಕ್ಲಾಸ್ ರೂಂನಲ್ಲಿ ಗಡಿಬಿಡಿಯಲ್ಲಿ ಲೇಖನಗಳನ್ನು ಎಡಿಟ್ ಮಾಡಿದ್ದು, ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ಹಾಕಿ ಫೈನ್ ಕಟ್ಟಿದ್ದು- ಎಲ್ಲವೂ ಕಣ್ಣ ಮುಂದೆ ರಪ್ ಎಂದು ಬಂದು ಹೋಗುತ್ತವೆ. ಈ ನಾಲ್ಕು ವರ್ಷಗಳುದ್ದಕ್ಕೂ ಒಳ್ಳೆ ಗೆಳೆಯನಾಗಿ, ವಿಶ್ವಾಸಾರ್ಹ ಎಡ್ಡಿಯಾಗಿ ಇದ್ದಿದ್ದಿಕ್ಕಾಗಿ ಧನ್ಯವಾದಗಳು. ಈ ನೆನಪಿನ ಭಂಡಾರದೊAದಿಗೆ ನಿನ್ನ ಭವಿಷ್ಯಕ್ಕೆ ಶುಭ ಕೋರುತ್ತಾ, ಈ ಪುಟವನ್ನು ಮುಗಿಸುತ್ತೇನೆ.

ವಿ. ಸೂ: ನನ್ನ ಕಾಲ್ಮೆಣಸಿನ ಗಿಡ, ಕೆಸುವಿನ ಗಿಡ ಮತ್ತು ಮರಗೆಣಸಿನ ಚಿಪ್ಸ್ ಎಲ್ಲಿ? *ಮೂಗಿನಿಂದ ಬಿಸಿ ಗಾಳಿ ಬಿಡುತ್ತಿರುವ ಎಮೋಜಿ*
ಎಚ್ಚರಿಕೆ: ಈ ಬಾರಿಯ ಬೋರ್ಡ್ ಟ್ರಿಪ್‌ಗೆ ನೀನು ಬರದೆ ಹೋದರೆ... *ಗರಗಸ ಎಮೋಜಿ*


Character Stats
Geekiness
Introversion
Peching
Paapaness
Speciality
Making torn clothes look good

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Shashank Venkatesan
  • Prarthana G. P.
  • Vinay Vasishta
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Harsha Bhat
  • Poorvi Shetty
  • Sanchita V. Kumar
  • Surabhi Seenivasan
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Bhuvan Koduru
  • Anagha Honnali
  • Abhilash Hathwar
  • Vadiraj B Hayagreeva
  • Pruthvi K P
  • Sharmilee Sosale
  • Sudhanva Kulkarni
  • Shreyas S
  • Poornima Hegde
  • Ninaad A Kaller
  • Gurudarshan M J
  • Vaishnavi Bharadwaj
  • Anurag G
  • Unnathi Prabhu
  • Tarun T
  • Shivani M
  • Anjana Hegde
  • Bhoomika S G
  • Anushree Bhat
  • Ananya P
  • Sai Supritha K P
  • Yashaswi V
  • Diya Sharvani