Prarthana G. P.

Prarthana G. P.

Polio Nurse Prathana

Graduated, ECE

ಪ್ರಾರ್ಥನಾ ‘ಪ್ರತನಾ’ ಅಥವಾ ‘ಪತನಾ’ ಅಗಿ ಆಗಾಗ ಬದಲಾಗುತ್ತಾಳೆ. ಪ್ರಾರ್ಥನಾ ‘ಪತನಾ’ ಆಗಿ ಬದಲಾಗುವುದಕ್ಕೆಕಾರಣವಿದೆ (ವಿ.ಸೂ: ಕಾರಣವನ್ನು ಅವಳ ಬಳಿ ತಪ್ಪದೇ ಕೇಳಿ).
ಜನರನ್ನು ಭೇಟಿ ಮಾಡಿದಾಗ ಅವರ ಉಭಯಕುಶಲೋಪರಿಯನ್ನು ವಿಚಾರಿಸುವ ಬದಲು, ಅವರ ಮನೆ ಹಾಗು ಬೀದಿಯಲ್ಲಿ ವಾಸಿಸುವ ಶ್ವಾನಗಳ ಕ್ಷೇಮವನ್ನು ಮೊದಲು ವಿಚಾರಿಸುವಳು. ಇವಳು ಊಟ ಮಾಡುವುದು ಮರೆತರೂ, ನಾಯಿಗೆ ಬಿಸ್ಕತ್ ಹಾಕುವುದನ್ನು ಮರೆಯುವುದಿಲ್ಲ.

ನಾನು ತುಂಬಾ ತಿಂತೀನಿ ಅಂತಾ ಎಲ್ಲರ ಹತ್ತಿರಾನೂ ಹೇಳ್ತಾ ಇರ್ತಾಳೆ, ಏನ್ ತಿಂತಾಳೋ ಅವಳಿಗೇ ಗೊತ್ತು. ಇವಳ ಶರೀರದ ತೂಕಕ್ಕಿಂತ ಇವಳ ಬ್ಯಾಗ್‌ನ ತೂಕವೇ ಜಾಸ್ತಿ. ಗಾಳಿ ಬಂದಾಗ ಗಟ್ಟಿಯಾಗಿ ನಿಲ್ಲಲೇ ಬೇಕಾದ ಈಕೆಗೆ ಗಾಡಿ ಓಡಿಸೋಕೆ ಬಲು ಇಷ್ಟ. (ಎಚ್ಚರಿಕೆ: ಗಾಡಿಯೇರುವ ಮುನ್ನ ಮರೆಯದಿರಿ, ನಿಮ್ಮ ಕೈ-ಕಾಲುಗಳಿಗೆ ನೀವೇ ಜವಾಬ್ದಾರರು)

ಇವಳಿಗೆ ಪಾಂಡಾ ಕಂಡರೆ ತುಂಬಾ ಇಷ್ಟ. ಪಾಂಡಾ ಸ್ಟಿಕರ್ಸ್‌ಳನ್ನು ಅವಳ ಬ್ಯಾಗ್‌ನ ಮೇಲೆ ಕಾಣಬಹುದು. ಎಲ್ಲರನ್ನು ನಗಿಸುವ ಈಕೆ, ತನ್ನ ಹಿಹಿಹಿ ನಗುವಿನಿಂದಾಗಿ ಗೇಲಿಗೊಳಗಾಗುವುದಷ್ಟೇ ಅಲ್ಲದೇ, ಆ ನಗುವನ್ನು ಬೇರೊಬ್ಬರು ಅನುಕರಿಸಬಾರದೆಂದು ನಿರ್ಭಂಧಿಸಿರುವಳಂತೆ. ಅಕಸ್ಮಾತಾಗಿಯೂ ಎಲ್ಲರ ಕಣ್ಣ್ ತಪ್ಪಿಸಿ ಈಕೆಯನ್ನು ಯಾರೇ ಅಪಹರಿಸುವುದು ಅಸಾದ್ಯ. ಏಕೆಂದರೆ ಇವಳ ಪ್ರತಿಯೊಂದು ಚಲನವಲನಗಳ ಬಗ್ಗೆ ಈಕೆ ಸದಾ ತನ್ನ ಸ್ನೇಹಿತರಿಗೆ update ಮಾಡುತ್ತಿರುತ್ತಾಳೆ. ಇವಳು ಸಾಮಾನ್ಯವಾಗಿ ಕೂಗಾಡಲ್ಲಾ. ಬಹಳ ತಾಳ್ಮೆಯಿಂದ ಎಲ್ಲವನ್ನು ಕೇಳಿಸಿಕೊಂಡು ಆಮೇಲೆ ಮಾತಾಡ್ತಾಳೆ. ರಹಸ್ಯವನ್ನು ರಹಸ್ಯವಾಗಿಡುವುದರಲ್ಲಿ ನಿಪುಣೆಯಂತೆ (ವಿ.ಸೂ: ಹೆಚ್ಚಿನ ಮಾಹಿತಿಗಾಗಿ ವಿಜೇತ ವೈಷ್ಣವ್ ಡಿ ಅವರನ್ನು ಕೇಳಿ). ಸಹಾಯ ಮಾಡುವುದರಲ್ಲಿ ಎತ್ತಿದ ಕೈ. ಇವಳ ವಸತಿ ನಿಲಯದ ಕಿರಿಯ ವಿದ್ಯಾರ್ಥಿನಿಯರು ಇವಳಿಗೆ ಬಕೆಟ್ ಹಿಡಿಯುವುದು ನೋಡಿದರೆ ಗೊತ್ತಾಗುತ್ತೆ.

ಈ ಮಲೆನಾಡಿನ ನೀರೆಗೆ, ಸೀರೆಯೆಂದರೆ ಅದೇನೋ ಅಚ್ಚುಮೆಚ್ಚು. ಸೀರೆಯುಟ್ಟು ಮೊಬೈಲ್ ಹಿಡಿದು ಸೆಲ್ಫಿ ಕ್ಲಿಕ್ಕಿಸುತ್ತಾ ಖುಷಿಪಡುತ್ತಾಳೆ. ಕ್ಯಾಮರಾದ ಮುಂದೆ ಬಂದು ನಿಂತು ವಿಭಿನ್ನ ಹಾಗು ವಿಚಿತ್ರ ಭಂಗಿಯಲ್ಲಿ ಛಾಯಾಚಿತ್ರಗಳಿಗೆ ಪೋಸ್ ನೀಡುವವಳು ನಮ್ ಪ್ರತನಾ. ಇತ್ತೀಚೆಗೆ ವ್ಯಾಯಾಮ ಶಾಲೆಗೆ ಬೆಳ್ಳಂಬೆಳಿಗ್ಗೆ ಎದ್ದು ಹೊಗ್ತಾ ಇದ್ದಾಳೆ. ತೂಕದಲ್ಲಿ ೨ ಕೆ.ಜಿ ಏರಿಕೆಯಾಗಿದೆಯಂಬ ಸುದ್ದಿ ನಮ್ಮ ಕಿವಿಗೆ ಬಿದ್ದಿದೆ.
ಈಕೆ ಸಂಪೂರ್ಣವಾಗಿ ‘ವೀಗನ್’ ಆಗಿ ಬದಲಾಗಲು ಪ್ರಯತ್ನಿಸುತ್ತಿದ್ದಾಳೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹಾಸ್ಟೆಲ್‌ನಲ್ಲಿ ತನ್ನ ಕೈಯ್ಯಾರೆ ‘ಟೋಫು’ ತಯಾರಿಸುವ ಸಾಹಸ ಮಾಡಲು ಹೊರಟು, ಇಡೀ ಕೋಣೆಯನ್ನೇ ರಸಾಯನ ಪ್ರಯೋಗಾಲಯದ ರೀತಿ ಮಾರ್ಪಾಡುಗೊಳಿಸಿದ್ದರೂ, ಅದು ಕೊನೆಗೆ ಸೇರಿದ್ದು ಡಸ್ಟ್ಬಿನ್ ರಾಯನ ಬಾಯಿಗಷ್ಟೇ. *pat pat*

ಇವಳು ಯಾರಿಗೂ ಬೈಯಲ್ಲಾ, ಬೈಯ್ದ್ರೂ ಗೊತ್ತಾಗಲ್ಲಾ. ‘ಮಂಗ’ ಅಂತ ಎಲ್ಲರಿಗೂ ಪ್ರೀತಿಯಿಂದ ಬೈಯ್ಯುವಳು. ಒಟ್ಟಿನಲ್ಲಿ ಇವಳು ಸಂಪಾದಕ ಮಂಡಳಿಯ ಪಾಪದ ಪ್ರಾಣಿ. ಸಂತೋಷ ಸತೀಶ್ ಅಗಾಗ ಕಿರುಚಿ ಇವಳನ್ನು ಗೋಳಾಡಿಕೊಳ್ಳುತ್ತಿರುತ್ತಾನೆ. ವಾಟ್ಸಪ್‌ನಲ್ಲಿ ಲಭ್ಯವಿರುವ ಬಿಳಿ ಚಂದ್ರಮನ ಇಮೋಜಿಯನ್ನು, ಸಂಭಾಷಣೆಯ ಮಧ್ಯೆ ಮಧ್ಯೆ ಸಮಯಕ್ಕೆ ಸರಿಯಾಗಿ ಕಳಿಸುವ ಈಕೆ, ಅದನ್ನು ಗುತ್ತಿಗೆ ಪಡೆದಿರುವಂತೆ ತೋರುತ್ತದೆ.

ನೋಡಲು ನೂಡಲ್ಸ್ ಅಂತೆ ಕಾಣಿಸಿದರೂ, ದಿನವಿಡೀ ಆಯಾಸವಿಲ್ಲದೇ ಕೆಲಸ ಮಾಡಬಲ್ಲ ಬಲವುಂಟು. ಎಲ್ಲಾ ಕೆಲಸವನ್ನು ಪಟಾಪಟ್‌ ಅಂತ ಮುಗಿಸುವ ಚತುರೆ. ಪ್ರತಿಯೊಂದು ಕೆಲಸಕ್ಕೂ ಫ್ಲೋ-ಚಾರ್ಟ್‌ಗಳನ್ನು ಸಿದ್ಧಪಡಿಸುವ ಈಕೆ, ಎಲ್ಲಾ ಕೆಲಸವನ್ನು ಬಹಳ ಜವಾಬ್ದಾರಿಯಿಂದ ನಿಭಾಯಿಸುತ್ತಾಳೆ. ಅದೃಷ್ಟವಶಾತ್ ನೀವು ಈಕೆಯನ್ನು ಎಂದಾದರೂ ಭೇಟಿ ಮಾಡಿದರೆ, ಈಕೆಯ ಸಮಯಪಾಲನೆಯ ಗುಟ್ಟುಗಳನ್ನು ಕೇಳಿ ತಿಳಿಯಿರಿ. ಪರಿಸರದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಈಕೆ, ಪರಿಸರ ಸಂಬಂಧಿ ಕೆಲಸಗಳಲ್ಲಿ ಯಾವಾಗಲೂ ತನ್ನನ್ನು ತೊಡಗಿಸಿಕೊಂಡಿರುತ್ತಾಳೆ.


Character Stats
Geekiness
Introversion
Peching
Paapaness
Speciality
Multitasking

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Shashank Venkatesan
  • Prarthana G. P.
  • Vinay Vasishta
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Harsha Bhat
  • Poorvi Shetty
  • Sanchita V. Kumar
  • Surabhi Seenivasan
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Bhuvan Koduru
  • Anagha Honnali
  • Abhilash Hathwar
  • Vadiraj B Hayagreeva
  • Pruthvi K P
  • Sharmilee Sosale
  • Sudhanva Kulkarni
  • Shreyas S
  • Poornima Hegde
  • Ninaad A Kaller
  • Gurudarshan M J
  • Vaishnavi Bharadwaj
  • Anurag G
  • Unnathi Prabhu
  • Tarun T
  • Shivani M
  • Anjana Hegde
  • Bhoomika S G
  • Anushree Bhat
  • Ananya P
  • Sai Supritha K P
  • Yashaswi V
  • Diya Sharvani