Meghana Kashyap

Meghana Kashyap

Mekap

Graduated, Environmental Engg.

ಪಟ-ಪಟ ನಡಿಗೆ, ಚಟ-ಪಟ ಮಾತು, ಮುಖದ ಮೇಲೊಂದು ಗಾಂಭೀರ್ಯ ಭರಿತ ಮುಗುಳುನಗು ಇಷ್ಟು ವಿವರಣೆ ಕೇಳಿದಾಕ್ಷಣ ಸಂಪಾದಕ ಮಂಡಳಿಯಲ್ಲಿ ಮೊದಲು ನೆನಪಾಗುವುದೇ ನಮ್ಮ ಮೇಘನಾ ಕಶ್ಯಪ್. ಹೊಸದೇನನ್ನೊ ಮಾಡಬೇಕೆಂಬ ಅತಿಯಾದ ತುಡಿತವನ್ನು ಹೊಂದಿರುವ ಈಕೆ ಪಾದರಸದಂತೆ ಚುರುಕು. ಸದಾ ಉತ್ಸಾಹ ಭರಿತಳಾಗಿದ್ದು, ತನ್ನ ಸೃಜನಾತ್ಮಕ ideaಗಳನ್ನು ಯಾವಾಗಲೂ ಸಂಪಾದಕ ಮಂಡಳಿಗೆ ನೀಡುತ್ತಲೇ ಇರುತ್ತಾಳೆ. ಈಕೆಯನ್ನು 'ideaಗಳ ಅಕ್ಷಯ ಪಾತ್ರೆ' ಎಂದರೆ ತಪ್ಪಾಗಲಾರದು. "ಮತ್ತೊಂದು! ... ಇನ್ನೊಂದು..." ಹೀಗೆನ್ನುತ್ತಾ ಮುಂದುವರಿಯುತ್ತಲೇ ಇರುತ್ತಾಳೆ. ಒಂದು ವಿಷಯವನ್ನು ಹತ್ತು-ಹಲವು ದೃಷ್ಟಿಕೋನಗಳಲ್ಲಿ ವಿಶ್ಲೇಷಿಸಿ, ಅದನ್ನು ಪದಗಳಲ್ಲಿ ಪೋಣಿಸಿ, ಕ್ಲಿಷ್ಟಕರವಾದ ವಿಚಾರವನ್ನೂ ಸ್ಪಷ್ಟವಾಗಿ ಹೇಳುವ ಈಕೆ ಅತ್ಯುತ್ತಮ ಮಾತುಗಾರ್ತಿ. ವಿಶಿಷ್ಟ ಪದಪುಂಜ, ಭಾಷೆಯ ಮೇಲೆ ವಿಶೇಷ ಹಿಡಿತವನ್ನು ಹೊಂದಿರುವ ಈಕೆ ಕವನರಚನೆಯಲ್ಲೂ ತನ್ನ ಕೈಚಳವನ್ನು ತೋರಿಸುತ್ತಲೇ ಇರುತ್ತಾಳೆ. ಪದಬಂಧ ಬಿಡಿಸಲೇ ಹೆಣಗಾಡುವ ನಾನು ಮೇಘನಾಳ ಪದಬಂಧ ರಚಿಸುವ ವೇಗಕ್ಕೆ ನಿಬ್ಬೆರಗಾಗಿದ್ದಂತು ಸುಳ್ಳಲ್ಲ.

ಪರಿಸರ ವಿಜ್ಞಾನ ವಿಭಾಗದಲ್ಲಿ ಕೊನೆಯ ವರ್ಷದಲ್ಲಿ ಓದುತ್ತಿರುವ ಕರಾವಳಿಯ ಈ ಬೆಡಗಿಗೆ ಪರಿಸರದ ಬಗ್ಗೆ ವಿಶೇಷ ಒಲವು, ಗಿಡಗಳನ್ನು ಬೆಳೆಸಿ ಪೋಷಿಸುವುದು ಈಕೆಯ ಹವ್ಯಾಸಗಳಲ್ಲೊಂದು. ಈಕೆ ಪರಿಸರ ಪ್ರೇಮಿ ಅಷ್ಟೇ ಅಲ್ಲ ಕನ್ನಡ ಪೇಮಿಯೂ ಹೌದು! ಕನ್ನಡಕ್ಕೆ, ಸಾಮಾನ್ಯವಾಗಿ ಭಾಷೆಗೆ, ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ instagram reels ಇರಲಿ ಈಕೆ like ಒತ್ತದಿರುವುದು ಕಾಣಸಿಗಲಿಕ್ಕಿಲ್ಲ. ಶಾಸ್ತ್ರೀಯ ನೃತ್ಯ, ಸಂಗೀತಗಳು ಇವಳ ಇನ್ನಿತರ ಹವ್ಯಾಸಗಳು. ತನ್ನ ಹಾಡಿನ ಮೂಲಕ ಸಂಪಾದಕರುಗಳನ್ನೆಲ್ಲ ಆಗಾಗ ರಂಜಿಸುತ್ತಿರುವ ಈಕೆ 'ನಾನು ಅತ್ಯುತ್ತಮ playlistಗಳಲ್ಲಿ ಒಂದನ್ನು ಹೊಂದಿದ್ದೇನೆ' ಎಂದು ಹೆಮ್ಮೆಯಿಂದ ತನ್ನ spotify playlistನ ಕುರಿತು ಹೇಳಿಕೊಳ್ಳುತ್ತಾಳೆ.

ಮೇಘನಾಳನ್ನು ಕೈಚೀಲವಿಲ್ಲದೇ ನೋಡಿರಲು ಸಾಧ್ಯವೇ ಇಲ್ಲ! ಹೌದು ಬ್ಯಾಗನಲ್ಲಿ ತಿಂಡಿ-ತಿನಿಸುಗಳು, ನೀರಿನ ಬಾಟಲಿ ಯಾವಾಗಲೂ ಇರುವಂತಹದ್ದೇ... ಬಾಟಲಿ ಅಂದರೆ ೧೦೦ಎಂ.ಎಲ್., ೨೦೦ಎಂ.ಎಲ್. ಚಿಕ್ಕ-ಪುಟ್ಟ ಬಾಟಲಿಯಲ್ಲ, ಬೃಹದಾಕಾರದ ಬಾಟಲಿ! ಹಾ! ಬೃಹದಾಕಾರ ಎಂದಾಕ್ಷಣ ನೆನಪಾಯಿತು, ಕೆಲವು ಮೂಲಗಳ ಪ್ರಕಾರ ಮೇಘನಾ ಅವಳ ಅಮ್ಮನನ್ನು 'ಆನೆ' ಎಂದೂ ಅವರು ಇವಳನ್ನು 'ಮರಿ ಆನೆ' ಎಂದೂ ಕರೆಯುತ್ತಾರಂತೆ!! ಅವಳ ಎಲ್ಲ ಬರಹಗಳ ಮೊದಲ editor ಅವಳ ಅಮ್ಮನೇ, ಎನ್ನುತ್ತದೆ ಮಾಹಿತಿ.
ಆಗಲೇ ಹೇಳಿದಂತೆ ತಿಂಡಿ-ತಿನಿಸುಗಳಿಗೂ ಮೇಘನಾಳಿಗೂ ಅವಿನಾಭಾವ ಸಂಬAಧ. ಸಂಪಾದಕ ಮಂಡಳಿಯ 'ಲಾರಾ ಕೂಟ'ವನ್ನು ಎಂದೂ ತಪ್ಪಿಸಿಕೊಳ್ಳದ ಈಕೆಗೆ ತಿಂಡಿಯನ್ನು ನಿರಾಕರಿಸಿಯೇ ಗೊತ್ತಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಹೊತ್ತಿಗೆ ಸರಿಯಾಗಿ ಹೊಟ್ಟೆಗೆ ಹಿಟ್ಟು ಬಿದ್ದರೆ ಮಾತ್ರ ಮುಂದಿನ ಕೆಲಸ ಎನ್ನುತ್ತಾಳೆ ಈ ತಿಂಡಿಪೋತಿ. ಶಬ್ದನ ಪೂರ್ವತಯಾರಿಯ ಸಮಯದಲ್ಲಿ "ನಾನು Yampaಗೆ ಹೋಗ್ತಿದಿನಿ ಯಾರಿಗಾದ್ರು ಏನಾದ್ರು ಬೇಕಾ?" ಎನ್ನುತ್ತಾ ನಮ್ಮೆಲ್ಲರಿಗೂ ತಿಂಡಿ-ತಿನಿಸುಗಳನ್ನು ತರುವುದನ್ನು ಮರೆಯುವುದಿಲ್ಲ.

ಏನೇ ಕೆಲಸವಿದ್ದರೂ ಸಂಪಾದಕ ಮಂಡಳಿಯ ಕೆಲಸಗಳಿಗೆ ಪ್ರಾಧಾನ್ಯತೆಕೊಟ್ಟು ಮಾಡಿಮುಗಿಸುವ ಶಿಸ್ತಿನ ಸಿಪಾಯಿ ಅಷ್ಟೇ ಅಲ್ಲದೇ ಸ್ನೇಹ ಜೀವಿಯೂ ಹೌದು! Watchmenಗಳನ್ನೂ "ಊಟ ಆಯ್ತಾ ಅಂಕಲ್?" ಎಂದು ಕಾಳಜಿಯಿಂದ ಮಾತನಾಡಿಸುವ ಈಕೆ ಶಿಕ್ಷಕವೃಂದದಲ್ಲೂ ಹೆಚ್ಚಿನವರಿಗೆ ಪರಿಚಿತಳಾಗಿದ್ದಾಳೆ. ಏನೇ ಕೇಳಿದರೂ ತಾಳ್ಮೆಯಿಂದ ಹೇಳಿಕೊಡುವ ಈಕೆ ತನಗೆ ಗೊತ್ತಿರದ ವಿಷಯಗಳನ್ನು ಆಸಕ್ತಿಯಿಂದ ಕೇಳಿತಿಳಿದುಕೊಳ್ಳುತ್ತಾಳೆ. ಈ ಹಸನ್ಮುಖಿಯಾಗಿರುವ, ಸೌಮ್ಯ ಸ್ವಭಾವದ, ಭಾವಜೀವಿ, ಮೇಧಾವಿ ಮೇಕಪ್ ಅಲಿಯಾಸ್ ಮೇಘನಾಳ ಜೀವನ ಸಂತೋಷ ಯಶಸ್ಸುಗಳಿಂದ ತುಂಬಿರಲಿ ಎಂದು ಆಶಿಸುವ...

-ಪೂರ್ಣಿಮಾ ಹೆಗ್ಡೆ


Character Stats
Geekiness
Introversion
Peching
Paapaness
Speciality
Singing

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Shashank Venkatesan
  • Prarthana G. P.
  • Vinay Vasishta
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Harsha Bhat
  • Poorvi Shetty
  • Sanchita V. Kumar
  • Surabhi Seenivasan
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Bhuvan Koduru
  • Anagha Honnali
  • Abhilash Hathwar
  • Vadiraj B Hayagreeva
  • Pruthvi K P
  • Sharmilee Sosale
  • Sudhanva Kulkarni
  • Shreyas S
  • Poornima Hegde
  • Ninaad A Kaller
  • Gurudarshan M J
  • Vaishnavi Bharadwaj
  • Anurag G
  • Unnathi Prabhu
  • Tarun T
  • Shivani M
  • Anjana Hegde
  • Bhoomika S G
  • Anushree Bhat
  • Ananya P
  • Sai Supritha K P
  • Yashaswi V
  • Diya Sharvani