Vadiraj B Hayagreeva

Vadiraj B Hayagreeva

* insert beautiful melodies *

Graduated, ECE

ನಿನ್ನಿಂದಲೇ... ನಿನ್ನಿಂದಲೇ... ಕನಸೊಂದು ಶುರುವಾಗಿದೆ" ಎಂದು ಎಅ ಕಾಲೇಜಿನಲ್ಲಿ ಹಾಡು ಕೇಳಿಸುತ್ತಿದೆ ಎಂದರೆ, ಅದು ನೂರರಲ್ಲಿ ತೊಂಭತ್ತ್ತೊಂಭತ್ತು ಭಾಗ ನಮ್ಮ ವಾದಿಯ ಕಂಠದಿಂದಲೇ ಎಂದರ್ಥ. ಹೀಗೆ ಹಾಡಿನಿಂದಲೇ ಮೋಡಿಮಾಡುವ ವಾದಿ ಉತ್ತರ ಕರ್ನಾಟಕದ ಖಡಕ್ ಹೈದ. ಹಾಗೆಂದ ಮಾತ್ರಕ್ಕೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿಯ ಹಾಗೆ ಒರಟು ಎಂದುಕೊಳ್ಳಬೇಡಿ; ಇವನ ಮನಸ್ಸು ಮಗುವಿನಷ್ಟೇ ಮುಗ್ಧ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವನಾದ ನಮ್ಮ ವಾದಿರಾಜ ಬಿ. ಹಯಗ್ರೀವ, ಪ್ರಸ್ತುತ ನಾಲ್ಕನೇ ವರ್ಷದಲ್ಲಿ ಬಿ. ಇ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಸಂಪಾದಕ ಮಂಡಳಿಯ ಮುಂದಾಳತ್ವವನ್ನು ನಿಭಾಯಿಸುತ್ತಿರುವ ಈತ ವಾರಾಂತ್ಯದ ಸಭೆಗಳಲ್ಲಿ ಎಡೆಬಿಡದೆ ನಿರರ್ಗಳವಾಗಿ ಮಾತನಾಡಬಲ್ಲ ಕುಶಲಿ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಓದುತ್ತಿರುವ ವಾದಿ, ಹಲವು ಸಂದರ್ಭಗಳಲ್ಲಿ ತನ್ನ ಈಸಿ
ವಿಷಯಗಳನ್ನಿಟ್ಟುಕೊಂಡು ಉಲ್ಲೇಖಿಸಿದ್ದೂ ಉಂಟು.

ವಾದಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ’ಓ ಮೇಘವೇ ಮೇಘವೇ ಹೋಗಿ ಬಾ’ ಹಾಡು ವಾದಿಗೆ ಬಹಳ ಪ್ರಿಯವಾದದ್ದು. ಈ ಹಾಡನ್ನು ಹಾಡುತ್ತಿದ್ದರೆ ವಾದಿಯ ಸಂಗೀತಸ್ವರದ ನಿನಾದ ಎಲ್ಲರ ಹೃದಯದಲ್ಲಿ ಮಾಧುರ್ಯತೆಯ ಅಲೆಯನ್ನೆಬ್ಬಿಸುತ್ತದೆ. ಆದರೆ ಈತ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸದಿರುವುದೇ ಆಶ್ಚರ್ಯಕರ ಸಂಗತಿ. ಯಾವುದೇ ಕಾಲದ ಹಾಡಾದರೂ, ಭಕ್ತಿಗೀತೆಯಾದರೂ, ಭಾವಗೀತೆಯಾದರು ಸಾಹಿತ್ಯ ನೋಡದೆ ನೀಲಾಜಾಲವಾಗಿ ಹಾಡಿಬಿಡುತ್ತಾನೆ.

ಸಂಗೀತ ಪ್ರೇಮಿಯಾದ ವಾದಿ ಸಿನಿಮಾ ಪ್ರೇಮಿಯೂ ಹೌದು. ಅದರಲ್ಲೂ ಡಾ. ರಾಜಕುಮಾರ್ ಅವರ ಸಿನಿಮಾಗಳೆಂದರೆ ಎಲ್ಲಿಲ್ಲದ ಪ್ರೀತಿ. ಪಕ್ಕಾ ಅಣ್ಣಾವ್ರ ಅಭಿಮಾನಿಯಾದ ವಾದಿ “ಮಚ್ಚಾ, ಏನೇ ಹೇಳು ಅಣ್ಣಾವ್ರ ತರ ಆಕ್ಟಿಂಗ್ ಯಾರ್ ಕೈಲೂ ಮಾಡಕ್ಕಾಗಲ್ಲ. ಅಣ್ಣಾವ್ರ ಲೆವೆಲ್ಲೇ ಬೇರೆ ಮಚ್ಚಾ” ಎಂದು ಹೇಳುವುದನ್ನು ಕೇಳುತ್ತಿರುತ್ತೇವೆ.

ವಾದಿ ಬಹುಮುಖ ಪ್ರತಿಭೆ. ಛಾಯಾಗ್ರಹಣದಲ್ಲಿ ಬಹಳ ಆಸಕ್ತಿ ಹೊಂದಿರುವ ವಾದಿ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗ್ರಫಿಗೆಂದೇ ಒಂದು ಖಾತೆಯನ್ನು ಮೀಸಲಿಟ್ಟಿದ್ದಾನಂತೆ. (ಇನ್ಸ್ಟಾಗ್ರಾಮ್ ಖಾತೆಯ ಹೆಸರು @mobile_photolia ಎಂದು ತಿಳಿದುಬಂದಿದೆ.)
ಇದಲ್ಲದೆ ವಿಡಿಯೋಗ್ರಫಿ ಎಡಿಟಿಂಗ್ ನಲ್ಲೂ ವಾದಿ ಎತ್ತಿದ ಕೈ. ಕಳೆದ ವರ್ಷದ ಶಬ್ದ್ ನ ಪ್ರೊಮೋ ವಿಡಿಯೋ ಅದ್ಭುತವಾಗಿ ಮೂಡಿ ಬಂದುದರ ಹಿಂದೆ ಇವನ ಕೈಚಳಕವೂ ಸೇರಿದೆ.

ಇಷ್ಟೇ ಅಲ್ಲದೆ, ವಾದಿಯ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳೂ ಉಂಟು. ರಾತ್ರಿ ಮಲಗುವ ಮುನ್ನ ಯೂಟ್ಯೂಬ್ ನೋಡುವ ಹವ್ಯಾಸ ಇವನಿಗಿದೆಯಂತೆ. ಕೆಲವೊಮ್ಮೆ ಯೂಟ್ಯೂಬ್ ಬದಲು ಹಾಸ್ಟೆಲ್ ಬಾಯ್ಸ್ ಗಳ ಜೊತೆ ಸಿನಿಮಾ ನೋಡಲು ನಿರ್ಧರಿಸಿದನೆಂದರೆ ಕೂತಲ್ಲಿಯೇ ನಿದ್ರೆಗೆ ಜಾರಿ ಬಿಡುತ್ತಾನೆ. ಹೀಗೆ ಮಲಗಿದ್ದಾಗೊಮ್ಮೆ ಇಲಿ ಇವನನ್ನು ಕಡಿದಿತ್ತಂತೆ. (P. S. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಓದುಗರಿಗೆ ಬಿಟ್ಟಿದ್ದು). ಆಫೀಸ್ ನಲ್ಲಿ ಕುಳಿತಿದ್ದಾಗ ಆಗಸದಲ್ಲೇನಾದರೂ ವಿಮಾನದ ಸದ್ದು ಕೇಳಿಸಿದರೆ ತಕ್ಷಣವೇ ಹೊರಗೆ ಬಂದು ಅದನ್ನು ನೋಡಿ ಆನಂದಿಸುತ್ತಾನೆ. ಘಮಘಮಿಸುವ ಭೋಜನವೆಂದರೆ ವಾದಿಗೆ
ಇಷ್ಟವಂತೆ, ವೆರೈಟಿ ಕ್ಯೂಸೀನ್ ಅಂದರೆ ಇನ್ನೂ ಇಷ್ಟವಂತೆ. ಹಲವು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ವೈವಿಧ್ಯಮಯ ರೆಸಿಪಿಗಳ ರುಚಿ ನೋಡುತ್ತಿರುತ್ತಾನೆ ಎಂದು ಅವರಿವರು ಹೇಳುತ್ತಿರುತ್ತಾರೆ.

ದೈವಭಕ್ತನಾದ ವಾದಿ ತನ್ನ ಆಧ್ಯಾತ್ಮಿಕ ನಂಬಿಕೆ ಹಾಗೂ ಮೌಲ್ಯಗಳನ್ನು ಬಹಳ ಗೌರವಿಸುತ್ತಾನೆ. ಸಾಮಾನ್ಯವಾಗಿ ಎಲ್ಲರೂ ಸ್ನಾಪ್ ಚಾಟ್ ಸ್ಟ್ರೀಕ್ ಇಡುವುದನ್ನು ನೀವು ನೋಡಿರಬಹುದು. ಆದರೆ ನಮ್ಮ ವಾದಿ ಪ್ರತಿ ಗುರುವಾರ ರಾಯರ ಮಠಕ್ಕೆ ಹೋಗುವ ಸ್ಟ್ರೀಕ್ ಇಟ್ಟುಕೊಂಡಿದ್ದಾನಂತೆ. ತನ್ನ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಈತ ಶಿಸ್ತಿನ ಸಿಪಾಯಿ. ತನ್ನ ಕಿರಿಯ ಸಂಪಾದಕರೆಲ್ಲರಿಗೂ ಮಾದರಿಯಂತಿದ್ದಾನೆಂದರೆ ತಪ್ಪಾಗಲಾರದು. ಸಂತೋಷದ ಸೂರ್ಯನಂತೆ ತನ್ನ ನಗುವಿನ ಬೆಳಕನ್ನು ಹರಡುತ್ತಾ ಹೊಳೆಯುವ ನದಿಯಂತೆ ಸದಾ ಉತ್ಸಾಹಿಯಾಗಿ ಹರಿಯುತ್ತಾ ಸುತ್ತಲಿನವರ ಮುಖದ ಮೇಲೆ ಮಂದಹಾಸ ಮೂಡಿಸುವ ವಾದಿಗೆ ಆಯಸ್ಸು, ಆರೋಗ್ಯ, ಯಶಸ್ಸು ದೊರೆತು ಸದಾ ಸುಖಿಯಾಗಿರಲೆಂದು ಆಶಿಸುತ್ತೇನೆ.


Character Stats
Geekiness
Introversion
Peching
Paapaness
Speciality
To shut a room up with his amazing vocals

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Shashank Venkatesan
  • Prarthana G. P.
  • Vinay Vasishta
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Harsha Bhat
  • Poorvi Shetty
  • Sanchita V. Kumar
  • Surabhi Seenivasan
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Bhuvan Koduru
  • Anagha Honnali
  • Abhilash Hathwar
  • Vadiraj B Hayagreeva
  • Pruthvi K P
  • Sharmilee Sosale
  • Sudhanva Kulkarni
  • Shreyas S
  • Poornima Hegde
  • Ninaad A Kaller
  • Gurudarshan M J
  • Vaishnavi Bharadwaj
  • Anurag G
  • Unnathi Prabhu
  • Tarun T
  • Shivani M
  • Anjana Hegde
  • Bhoomika S G
  • Anushree Bhat
  • Ananya P
  • Sai Supritha K P
  • Yashaswi V
  • Diya Sharvani