Sanchita V. Kumar

Sanchita V. Kumar

#1 Cream of Mushroom Soup fan

Graduated, CSBS

"ಈ ಸಲ ಲಾಸ್ಟ್! ಇನ್ಮುಂದೆ hಥಿbಡಿiಜ meeಣ ಆಗಲ್ಲ ಕಣ್ರೋ... ತುಂಬಾನೆ ಕೆಲ್ಸ ಬಾಕಿ ಇದೆ." ಅಂತ 'ವಾಟ್ಸಾಪ್' ನಲ್ಲಿ ತಿಳಿಸಿ, ಹೆಲ್ಮೆಟ್ ಹಾಕಿ, ಅದರಡಿಯಲ್ಲಿ ಸಿಕ್ಕದೇ ಬಚಾವಾದ ಕೂದಲನ್ನು ಹಾರಾಡಲು ಬಿಡುತ್ತಾ ತನ್ನ ಸ್ಕೂಟಿ ಅಲ್ಲಿ ಜ಼ುಮ್... ಅಂತ ಬರ್ತಾಳೆ. ಕನ್ನಡ್ಕದ ಒಳಗಿನ ಕಣ್ಣು ಗೋಚರವಾಯಿತು ಅನ್ನುವಷ್ಟರಲ್ಲಿ ನಿಮಗೆ "ಹಾಯಿ! ಹೇಗಿದ್ದೀಯಾ?!" ಎಂದು ಕೇಳುತ್ತಾ ತನ್ನ ಕೆಲಸ ಶುರು ಮಾಡೇ ಬಿಡ್ತಾಳೆ. ಡುಂಡಗಿನ ಮುಖ ಗಡಿಬಿಡಿಯಲ್ಲಿ ಬರುವಷ್ಟರಲ್ಲಿ ಕೆಂಡದAತೆ ಕೆಂಪಾಗಿರತ್ತೆ. ಆದರೆ ಏನೇ ಹೇಳಿ. ನಾನು ಇಲ್ಲಿಯವರೆಗೆ ಕಂಡ ಜನರಲ್ಲಿ ಇವಳು ಅಮೇಜ಼ಿಂಗ್ ಗುರು. ಹೋ! ಇವಳ ಹೆಸರು ಹೇಳಿಲ್ಲ ಅಲ್ಲ. ಇವಳು ನಮ್ಮ ಸಂಚಿತ. ಪ್ರೀತಿಯಿಂದ 'ಸ್ಯಾಂಟಾ' ಅಂತ ಕರೀತೀವಿ. ಕನ್ನಡ ವಿಭಾಗದ 'ಚಿಫ್'(ಛಿhieಜಿ) ಆಗಿ ಕಾರ್ಯಭಾರ ಸಂಭಾಳಿಸುತ್ತಿರುವ ಇವಳು, ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವು, ಮಾಹಿತಿ ನೈಪುಣ್ಯತೆಯನ್ನ ಹೊಂದಿದವಳು. ಯಾವಾಗಲೂ ಹೊಸತನವನ್ನು ಅರಸುತ್ತಾ ಎನಾದರು ಹೊಸ ಪ್ರಯೋಗದಲ್ಲಿ ತೊಡಗಿರುತ್ತಾಳೆ. ಇತ್ತೀಚೆಗೆ ಹಳೆಗನ್ನಡ ಶೈಲಿಯನ್ನು ಕಲಿಯುತ್ತಾ ಅದರಲ್ಲಿ ಒಂದು ಕವಿತೆ ಆದರು ಬರೀಬೇಕು ಅಂತ ಧ್ಯೆಯ ಇಟ್ಟಿದ್ದಾಳೆ ಅಂತ ಮಾಹಿತಿ. ತನ್ನ ಕೈ ಕುಸುರಿ ಕೆಲಸಗಳನ್ನು ಅವಳು ಕೊಡುವ ಉಡುಗೊರೆಗಳಲ್ಲಿ ತುಂಬಿ ಇನ್ನು ಅಲ್ಲಿ ಜಾಗ ಮಿಕ್ಕದ್ದಷ್ಟನ್ನ ಪುಟ್-ಪುಟಾಣಿ 'ಏಸ್ಥೆಟಿಕ್-ಕ್ಯೂಟ್-ಲುಕಿಂಗ್-ಗುಡ್ಡೀಸ್'ಗಳಿAದ ತುಂಬಿ ಅದನ್ನು ಎಂದೂ ಮರೆಯಲಾರದಂತೆ ಮಾಡುತ್ತಾಳೆ. ಹೇಳಿದ ಹಾಗೆ, ಇವಳಿಗೆ ವಿಚಿತ್ರ ತಿಂಡಿಗಳನ್ನು ಒಮ್ಮೆಯಾದರೂ ಆಸ್ವಾದಿಸಿ ನೋಡಬೇಕು ಎಂಬ ಹಂಬಲ. ತಾನು ಹೋದ ಭೋಜನಾಲಯಗಳಲ್ಲೆಲ್ಲ ಹೊಸ ರುಚಿಗಳನ್ನು ಪ್ರಯೋಗಿಸುತ್ತ, ಒಂದನ್ನು ಇನ್ನೊಂದರ ಜೊತೆ 'ಮಿಕ್ಸ್-ಮ್ಯಾಚ್' ಮಾಡಿ ಇನ್ನೊಬ್ಬರಿಗೆ ಅದರ ರುಚಿ ನೋಡಲು ಪ್ರೋತ್ಸಾಹಿಸಿದ್ದು ಇದೆ. ಹೀಗೆ ಇನ್ನೊಂದು ವಿಷವೆಂದರೆ, ಅವಳು ಒಂದು ಬಾರಿಯಾದರೂ ಶಾಲಾ ಪ್ರಾರ್ಥನಾ ಸಭೆ(ಎಸೆಮ್ಬಲಿ)ಯಲ್ಲಿ, ತಲೆ ಸುತ್ತಿ ಬೀಳಬೇಕು ಎಂದು ಅಂದು ಕೊಂಡಿದ್ದಳAತೆ. ಅವಳ ತಪ್ಪೇನಿಲ್ಲ ಬಿಡಿ. ಆ ರಣ ಬಿಸಿಲಿನಲ್ಲಿ ಪ್ರಾರ್ಥನಾ ಸಂಭೆಗೆ ನಿತ್ತ ಪ್ರತಿ ಮಗುವ ಮನಸ್ಸಿನಲ್ಲಿಯೂ ಈ ಯೋಚನೆ ಬಂದೆ ಇರುತ್ತದೆ. ಇನ್ನು ಇವಳ ಇಷ್ಟ-ಕಷ್ಟಗಳು ಹೆಳಬೇಕೆಂದರೆ ಕೇಳಿ. ಇವಳಿಗೆ ಬೆಕ್ಕು ಅಂದರೆ ಸಾಕು, ಇರೋದೆಲ್ಲ ಬಿಟ್ಟು ಮೊದಲಿಗೆ ಅದನ್ನ ಮುದ್ದು ಮಾಡಲು ಹೋಗ್ತಾಳೆ. ಮೊನ್ನೆ ಲಾರಾದಲ್ಲಿ ಕಂಡ ಒಂದು ಪುಟಾಣಿ ಮರಿಯನ್ನು ಕಂಡು ಅದನ್ನ ಎತ್ತಿ ಅದರ ತಲೆ ಸವರಿ "ಪಾಪ ಇದಕ್ಕೆ ಶೆಕೆ ಆಗ್ತಿದೆ. ಹಸಿದಿದೆ ಕೂಡ.", ಅಂತ ಹೇಳಿ ಅಲ್ಲಿಂದ ಒಂದು ಕಪ್ ಐಸ್ಕ್ರೀಮನ್ನ ತಂದು ಚಿಕ್ಕ ಚಮಚದಲ್ಲಿ ಆ ಬೆಕ್ಕುಮರಿಗೆ ತಿನ್ನಸಿದ್ದೂ ಇದೆ. ಆದರೆ ನಾಯಿಗಳಿಂದ ಒಂದಡಿ ದೂರವೇ ಇರುತ್ತಾಳೆ. ಇತ್ತೀಚೆಗೆ ಪರವಾಗಿಲ್ಲ. ಅದು ಪಕ್ಕದಲ್ಲಿ ಸುಮ್ಮನೆ ಕೂತಿದೆ ಅಂದರೆ ಇವಳು ಉಸಿರು ಬಿಗಿ ಹಿಡಿಯದೆ ಕೂರುವಷ್ಟು ಧೈರ್ಯ ಬಂದಿದೆ. ನಮ್ಮ ಮಂಡಳಿಯ 'ಹಾಸ್ಟೆಲ್ ಬಾಯ್ಸ್' ಇವಳನ್ನು ಯಾವಾಗಲೂ ಗೋಳು ಹೊಯ್ಕೊಳ್ಳೋದು ಹೊಸ ವಿಷಯವೇನಲ್ಲ ಬಿಡಿ. ಇದರ ಬಗ್ಗೆ ಅವಳನ್ನು ಕೇಳಿದರೆ "ಹ್ಞೂ ಲೆ... ಹೇಳೊದಕ್ಕಷ್ಟೆ ಇವರು ಜೂನಿಯರ್ಸ್. ನಾವು ಅವರನ್ನ ಡಿಚಿg ಮಾಡೂದು ಇರ್ಲಿ, ಇವರೇ ನನ್ನ ಡಿಚಿg ಮಾಡ್ತಿರೊದು ಅನ್ನಿಸ್ತಿದೆ" ಅಂತ ತನ್ನ ಪಾಡನ್ನ ಹೇಳುತ್ತಾಳೆ. ಏನು ತಾನೆ ಮಾಡಕ್ಕಾಗತ್ತೆ. ಅಂದ ಹಾಗೆ ಇವಳ ತಲೆಗೆ ಹುಳ ಬಿಡೋದು ಅತ್ಯಂತ ಸುಲಭದ ಕಾರ್ಯ. ಆ ಹುಳ ತಲೆ ತಿನ್ನುವಷ್ಟೆಲ್ಲಾ ತಿಂದಾದ ಮೇಲೆ, "Whಚಿಣeveಡಿ! ಇರ್ಲಿ ಬಿಡು. ಅದನ್ನ ಆಮೇಲ್ ನೋಡಣ." ಎಂದು ಹೇಳುತ್ತಾ ಆ ಹುಳದ ಅಂತ್ಯಸAಸ್ಕಾರವಾಗುತ್ತದೆ. ಚರ್ಚಾ-ಅಖಾಡದಲ್ಲಿ ಎತ್ತಿದ ಕೈ. ವಾದ-ವಿವಾದಗಳು ಮಂಡಿಸುವ ನೈಪುಣ್ಯತೆಯ ಎದುರು ನಾನಂತು ಫೇಲ್. ತಾನು ಯಾವುದೇ ಕೆಲಸ ಮಾಡಿದರೂ ಅದು ಉತ್ಕೃಷ್ಟ ಗುಣಮಟ್ಟದ್ದಾಗಬೇಕು ಎಂದು ಉತ್ತಮ ಶ್ರಮ ವಹಿಸುತ್ತಾಳೆ. ಹಾಗೆ ಗೈದು ದುಡಿದು, ಅದು ತನ್ನ ಮನಸ್ಸಿನಲ್ಲಿ ಇದ್ದಷ್ಟು 'ಠಿeಡಿಜಿeಛಿಣ' ಆಗಲಿಲ್ಲ ಎಂದಾಗ ಸಪ್ಪೆ ಮುಖ ಹಾಕಿದ್ದು ಇದೆ. ಆದರೂ ತನ್ನ ಸಂಗಡಿಗರಿAದ "ಇಲ್ಲಮ್ಮ...ನೀನು ಇದಕ್ಕೋಸ್ಕರ ಏನೆಲ್ಲಾ ಪ್ಲಾನ್ ಮಾಡಿದ್ದೆ ಅನ್ನೋದು ಬರಿ ನಿನಗಷ್ಟೇ ಗೂತ್ತು. ನಾವು ನೋಡಿದವರಿ ಎಲ್ಲಿ ತಪ್ಪಾಯ್ತು ಅಂತ ಗೊತ್ತಾಗಿಲ್ಲ. ಸೋ...ಚಿಲ್ಲ್ ಮಾಡು ಮಾ" ಎಂಬ ಅಭಿಪ್ರಾಯ ದೊರಕಿದಾಗಲೇ ಸ್ವಲ್ಪ ಸಮಾಧಾನ ಆಗೋದು. ಆದ್ದರಿಂದ ಇವಳನ್ನು ಬಹಳಷ್ಟು ಮಂದಿ 'ಪರ್ಫೆಕ್ಷನಿಸ್ಟ್' ಅಂತಾರೆ. "ಇಲ್ಲ ಭೈ! ನಾನು ಅಷ್ಟೆಲ್ಲ ಇಲ್ಲ." ಅಂತ ಇವಳ ವಾದ. ಅಷ್ಟರಲ್ಲಿ ಅವಳ ಜಂಗಮವಾಣಿಯಿAದ ಅಮ್ಮನ ಕರೆಸದ್ದು ಕೆಳಿಸಿದೆ. ಹೂಂ...ಮಾ...ಹೂA...ಇಗಷ್ಠೇ ಮೀಟ್ ಮುಗೀತು. ಇನ್ನೇನು ಬಂದೇ ಬಿಡ್ತೀನಿ. ಸರಿ ಇಡ್ತೀನಿ" ಎಂದು ಅಮ್ಮನನ್ನು ಸಮಾಧಾನಿಸುತ್ತಾಳೆ. ಹೀಗೇ ಇನ್ನೂ ತುಂಬಾ ವಿಷಯಗಳನ್ನು ಹೇಳಬಹುದು. ಇವಳ ವೈಶಿಷ್ಟ್ಯಗಳ ಪಟ್ಟಿ ಹೀಗೇ ಬೆಳೆಯುತ್ತಾ, ಇನ್ನೂ ಹೆಚ್ಚಿನ ಸಾಧನೆಗಳಲ್ಲಿ ಯಶಸ್ಸು ದೊರೆಯಲಿ ಎಂದು ಆಶಿಸುತ್ತೇನೆ.


Character Stats
Geekiness
Introversion
Peching
Paapaness
Speciality
Attracts serial killers

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Shashank Venkatesan
  • Prarthana G. P.
  • Vinay Vasishta
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Harsha Bhat
  • Poorvi Shetty
  • Sanchita V. Kumar
  • Surabhi Seenivasan
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Bhuvan Koduru
  • Anagha Honnali
  • Abhilash Hathwar
  • Vadiraj B Hayagreeva
  • Pruthvi K P
  • Sharmilee Sosale
  • Sudhanva Kulkarni
  • Shreyas S
  • Poornima Hegde
  • Ninaad A Kaller
  • Gurudarshan M J
  • Vaishnavi Bharadwaj
  • Anurag G
  • Unnathi Prabhu
  • Tarun T
  • Shivani M
  • Anjana Hegde
  • Bhoomika S G
  • Anushree Bhat
  • Ananya P
  • Sai Supritha K P
  • Yashaswi V
  • Diya Sharvani