Yashaswi V

Yashaswi V

Rangoli Prodigy Rangubai

Graduated, ECE

ನಮ್ಮ ರಂಗು ಬಾಯಿ
ಇತರರು ಬರೀ ಖಾಲಿ ನೆಲವನ್ನು ನೋಡಿದರೆ, ಯಶಸ್ವಿ ಅದನ್ನು ಜೀವ ತುಂಬಬೇಕಾದ ಒಂದು ಕ್ಯಾನ್ವಾಸ್ ಎಂದು ಕಾಣುತ್ತಾಳೆ. ಶಾಂತ ದೇವಾಲಯಗಳ ಬೀಡಾದ ಉಡುಪಿಯಿಂದ ಬಂದ ಯಶಸ್ವಿ, ಅದೇ ಸೌಮ್ಯತೆಯನ್ನು ತನ್ನ ಸ್ವಭಾವದಲ್ಲೂ ತೋರುತ್ತಾಳೆ. ವಿದ್ಯುನ್ಮಾನ ಮತ್ತು ಸಂವಹನ ತಾಂತ್ರಿಕತೆ (ಇಅಇ) ಓದುತ್ತಿದ್ದರೂ, ಅವಳ ಮನಸ್ಸು ಸದಾ ಕಲೆಯೆಡೆಗೆ ಸೆಳೆದಿರುತ್ತದೆ. ಸಿಲಬಸ್ ಕ್ಯಾನ್ವಸ್ ಎರದಕ್ಕೂ ಸೈ ಎನ್ನುವ ಇವಳು ಓದು ಮತ್ತು ಕಲೆ ಎರಡನ್ನೂ ತುಂಬಾ ಸುಲಭವಾಗಿ ನಿಭಾಯಿಸುತ್ತಾಳೆ.

ಕ್ಯಾಂಪಸ್‌ನಲ್ಲಿ ಅವಳು ‘ರಂಗೋಲಿ ಅಕ್ಕ’ ಎಂದೇ ಪ್ರಸಿದ್ಧಳು. ಆದರೆ ನಮಗೆ ಅವಳು ಪ್ರೀತಿಯ “ರಂಗು ಬಾಯಿ”. ಪೆನ್ಸಿಲ್‌ನಲ್ಲಿ ಮುಖಚಿತ್ರ ಬಿಡಿಸುವುದೇ ಕಷ್ಟವಾದರೆ ಯಶಸ್ವಿ ನೆಲದ ಮೇಲೆ ರಂಗೋಲಿ ಪುಡಿಯಿಂದ ಅದ್ಭುತವಾದ ಭಾವಚಿತ್ರಗಳನ್ನು ಒಂದೇ ಏಟಿಗೆ ಬಿಡಿಸುತ್ತಾಳೆ. ಅಲ್ಲಿ ತಿದ್ದಲು ಅವಕಾಶವಿಲ್ಲ, ಕೇವಲ ಅವಳ ಕೈಚಳಕವಷ್ಟೇ. ಇತ್ತೀಚೆಗೆ ಅವಳಲ್ಲಿರುವ ಪ್ರತಿಭೆ ಇನ್ನೊಂದು ಹಂತಕ್ಕೆ ತಲುಪಿದೆ. ಈಗ ಅವಳು ಆಯೋಧ್ಯೆಯ ಬಾಲರಾಮ, ರಾಘವೇಂದ್ರ ಸ್ವಾಮಿ ಮತ್ತಿತರ ದೇವರ ಚಿತ್ರಗಳನ್ನು, ವಿಶೇಷವಾಗಿ ಶ್ರೀಕೃಷ್ಣನನ್ನು ರಂಗೋಲಿಯಲ್ಲಿ ಮೂಡಿಸುತ್ತಾಳೆ. ಅವಳ ಕೃಷ್ಣ ಭಕ್ತಿ ಅವಳ ಕೆಲಸದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅದು ಕೇವಲ ಪ್ರತಿಭೆಯಲ್ಲ, ಅವಳ ಭಕ್ತಿಯ ಪ್ರತಿರೂಪ. ಅವಳಲ್ಲಿ ಹರಿಯುವ ಈ ಭಕ್ತಿ ದಿನಕ್ಕೆ ನೂರು ಬಾರಿ ‘oh my god’ನ ಮೂಲಕವೂ ಹೊರಗೆ ಬರುತ್ತದೆ. ಹಾಗಾಗಿ, ಮುಂದಿನ ಸಲ ನಮ್ಮ ಕಾಲೇಜಿನಲ್ಲಿ ಒಂದು ಸುಂದರ ರಂಗೋಲಿ ಕಂಡರೆ, 'ಇದನ್ನು ಯಾರು ಬಿಡಿಸಿರಬಹುದು?' ಎಂದು ಆಶ್ಚರ್ಯಪಡಬೇಡಿ. ಸುಮ್ಮನೆ ಮುಗುಳ್ನಗುತ್ತಾ ನೆನಪಿಸಿಕೊಳ್ಳಿ ಇದು ಖಂಡಿತ ನಮ್ಮ 'ರಂಗು ಬಾಯಿ'ಯ ಕೆಲಸ ಅಂತ!

ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಹೋಗುವುದೆಂದರೆ ಅವಳಿಗೆ ಇಷ್ಟ. ಸಂಗೀತದಲ್ಲಿ ಅವಳು ಸಂಪೂರ್ಣವಾಗಿ ಮಗ್ನಳಾಗಿರುತ್ತಾಳೆ. ಭರತನಾಟ್ಯ ಕಲಿತಿರುವ ಅವಳಿಗೆ ಕಲೆಯ ಶಿಸ್ತು ಚೆನ್ನಾಗಿ ಗೊತ್ತು. ಭಾರಟಣಾತ್ಯವನ್ನು ಇಷ್ಟ ಪಡುವ ಇವಳಿಗೆ ಬಟ್ಟೆ ಒಗೆಯುವುದೆಂದರೆ ಅಷ್ಟೇ ಇಷ್ಟವಿಲ್ಲವಂತೆ. ಹಾಸ್ಟಲ್ ನಲ್ಲಿ ಹಾಲಿಯಾಗಿ ನೆಲೆಸಿರುವ ಇವಳು ಆಗಾಗ ದೊಡ್ಡಮ್ಮನ ಮನೆಗೆ ಹೋಗಿ ಬರುವುದರಿಂದ ಸ್ವಲ್ಪವಾದರೂ ದಷ್ಟ ಪುಷ್ಟವಾಗುತ್ತಳ ಎಂದು ಕಾದು ನೋಡಬೇಕು.

ಅವಳ ಪ್ರತಿಭೆಗಿಂತಲೂ ಅವಳ ವ್ಯಕ್ತಿತ್ವ ಅತ್ಯಂತ ವಿಶೇಷವಾದುದು. ಯಶಸ್ವಿ ಯಾವಾಗಲೂ ಶಾಂತ, ಮಂದಹಾಸ ಬೀರುತ್ತಾ ಸಂಯಮದಿAದಿರುವ ವ್ಯಕ್ತಿತ್ವದವಳು. ಅಪಾರ ತಾಳ್ಮೆ ಅವಳಲ್ಲಿದೆ. ಅವಳಿಗೆ “ಟೆಂಪಲ್ ರನ್” ಎಂದರೆ ಮೊಬೈಲ್ ಗೇಮ್ ಅಲ್ಲ, ಬದಲಿಗೆ ಒಂದೇ ಟ್ರಿಪ್‌ನಲ್ಲಿ ಹತ್ತಾರು ದೇವಾಲಯಗಳಿಗೆ ಭೇಟಿ ನೀಡುವ ಆಧ್ಯಾತ್ಮಿಕ ಮ್ಯಾರಾಥಾನ್! ಇದರ ಜೊತೆಗೆ, ಅವಳು ಪ್ರಧಾನಿ ಮೋದಿಯವರ ಅಭಿಮಾನಿ ಕೂಡ. ಇಷ್ಟೆಲ್ಲಾ ವಿಶೇಷತೆಗಳಿದ್ದರೂ, ಯಶಸ್ವಿ ಸದಾ ಸರಳವಾಗಿಯೇ ಇರುತ್ತಾಳೆ. ಯಾವುದೇ ಅಬ್ಬರವಿಲ್ಲ, ಆಡಂಬರವಿಲ್ಲ. ಅವಳ ಕೆಲಸವೇ ಅವಳ ಪರವಾಗಿ ಮಾತನಾಡುತ್ತದೆ. ಹೆಚ್ಚು ಮಾತನಾಡದೆ ಎಲ್ಲವನ್ನೂ ಗಮನಿಸುವ ಚಾಣಾಕ್ಷತನ ಅವಳಲ್ಲಿದೆ. ಈ ಸರಳತೆಯೇ ಅವಳ ದೊಡ್ಡ ಶಕ್ತಿ.

ಇವಳ ಬಗ್ಗೆ ಇತ್ತೀಚಿಗೆ ನಮಗೆ ತಿಳುದುಬಂದ ವಿಷಯವೊಂದಿದೆ. ಇವಳು ನಳಪಾಕವನ್ನೂ ಸೃಷ್ಟಿಸಬಲ್ಲಳಂತೆ. ನಮಗೂ ಅವಳ ಕೈರುಚಿ ಸವಿಯಿಸುತ್ತಳೆಂದು ಆಶಿಸುತ್ತೇವೆ. ಒತ್ತಡದವ ಎದುರಿಸಲು ಚಿತ್ರಪಟದತ್ತ ಸಾಗುವ ಈ ಕುವರಿ ಸಂಪಾದಕಮAಡಳಿಯ ಸೌಂದರ್ಯವನ್ನು ಹೆಚ್ಚಿಸಿದ್ದಾಳೆ. ಯಾರಿಗೂ ‘ನೋ’ ಹೇಳಲು ಬಾರದ ಇವಳ ಜೀವನವೂ ಇವಳ ಯಾವ ಆಶಯಗಳಿಗೂ ‘ನೋ’ಯೆನ್ನದೆ, ನಗುಮುಖದ ಬಣ್ಣ ಮಾಸದಂತೆ ಸುಂದರ ಚಿತ್ತರವಾಗಲಿ ಎಂದು ಹಾರೈಸುತ್ತೇನೆ.


Character Stats
Geekiness
Introversion
Peching
Paapaness
Speciality
She can create wonders with rangoli

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Shashank Venkatesan
  • Prarthana G. P.
  • Vinay Vasishta
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Harsha Bhat
  • Poorvi Shetty
  • Sanchita V. Kumar
  • Surabhi Seenivasan
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Bhuvan Koduru
  • Anagha Honnali
  • Abhilash Hathwar
  • Vadiraj B Hayagreeva
  • Pruthvi K P
  • Sharmilee Sosale
  • Sudhanva Kulkarni
  • Shreyas S
  • Poornima Hegde
  • Ninaad A Kaller
  • Gurudarshan M J
  • Vaishnavi Bharadwaj
  • Anurag G
  • Unnathi Prabhu
  • Tarun T
  • Shivani M
  • Anjana Hegde
  • Bhoomika S G
  • Anushree Bhat
  • Ananya P
  • Sai Supritha K P
  • Yashaswi V
  • Diya Sharvani