Sudhanva Kulkarni

Sudhanva Kulkarni

RAT-A-TAT

Graduated, ECE

ನೀವು ಕಾಲೇಜಿನಲ್ಲಿ ಎಲ್ಲಿಯಾದರು ನಮ್ಮ (Eddies) ಗುಂಪನ್ನ ಕಂಡ್ರೆ, ಅಲ್ಲಿಂದ ಏನಾದ್ರು ಉತ್ತರ ಕರ್ನಾಟಕದ ಭಾಷೆಯನ್ನ ಕೇಳಿದ್ರಿ ಅಂತಾದ್ರೆ ಅದು ಬೇರೆ ಯಾರು ಆಗಿರಲಿಕ್ಕೆ ಸಾಧ್ಯನೇ ಇಲ್ಲ. ಪಕ್ಕಾ ಅಥಣಿಯ ಪ್ರಾಣಿ ಸುಧನ್ವ ಕುಲಕರ್ಣಿ! (ಕನ್ನಡ ವಿಭಾಗದ ಪ್ರಧಾನ ಸಂಪಾದಕರನ್ನ ಪರಿಚಯಿಸುವಾಗಲೇ ಇಷ್ಟೊಂದು ಗೌರವ ಬೇಡವೆಂದುಕೊಂಡೆ *ಬಾಯಿಮುಚ್ಚಿ ನಗುವ ಇಮೋಜಿ*) ಪಕ್ಕಾ ಉತ್ತರ ಕರ್ನಾಟಕದ ಹೈದ ಸುಧನ್ವ ಕುಲಕರ್ಣಿ.

ಪಕ್ಕಕ್ಕಿರುವ ಛಾಯಾಚಿತ್ರ ನೋಡಿದ ಮೇಲೇ ಮತ್ತೆ ಉತ್ತರ ಕರ್ನಾಟಕದವ ಎಂದು ಪರಿಚಯಿಸುವ ಅವಶ್ಯಕತೆಯೇನೂ ಇರಲಿಲ್ಲ.. ಛಾಯಾಚಿತ್ರಕ್ಕಾಗಿ ಹೆಗಲ ಮೇಲಿನ ಟಾವೆಲ್ ತೆಗಿ ಎಂದಿದ್ದಕ್ಕೆ, ಅದು ನಮ್ಮ 'ಟ್ರೇಡ್ ಮಾರ್ಕ' ಇದ್ದ ಹಾಗೆ, ಅದು ಹಾಗೇ ಇರಲಿ ಎಂದು ನಗುತ್ತಾ ಪೋಸ್ ಕೊಟ್ಟವ ಇವ. ಮೇಲ್ನೋಟಕ್ಕೆ ಬಹಳ ಶಾಂತ ಸ್ವಭಾವದವನಂತೆ ಕಂಡುಬರುವ ಈತನನ್ನು ಪಾಪ, ನಿರುಪದ್ರವಿ ಎಂದೆಲ್ಲಾ ಭಾವಿಸುವ ತಪ್ಪನ್ನು ನನ್ನಂತೆ ನೀವು ಮಾಡಬೇಡಿ. ತನ್ನ ಪಂಚ್ ಡೈಲಾಗ್‌ಗಳ ಮೂಲಕ ಜನರನ್ನು ರೋಸ್ಟ್ ಮಾಡುವುದರಲ್ಲಿ ಇವರು ಎತ್ತಿದ ಕೈ. ಇವನ ರೋಸ್ಟ್‌ಗೆ ಆಹಾರ ಪ್ರೊಫೆಸರ್‌ಗಳಿರಬಹುದು, ಸ್ನೇಹಿತರಿರಬಹುದು ಅಥವಾ ಎದುರಗಿರುವ ನೀವೇ ಆಗಿರಲೂಬಹುದು... ಎಚ್ಚರ!

ನಿಶಾಚರಿ ಜಾತಿಗೆ ಸೇರುವ ಈ ಪ್ರಾಣಿ ನಿದ್ದೆಗಾಗಿ ಬೆಳಗಿನ ತಿಂಡಿಯನ್ನು ತ್ಯಾಗಮಾಡುತ್ತದಂತೆ… ಹಾಸ್ಟೆಲ್‌ನಲ್ಲಿ ರುಚಿಕರವಾದ ತಿಂಡಿ ಇದ್ದರೆ ಮಾತ್ರ ನಿದ್ರೆಯನ್ನು ತ್ಯಾಗ ಮಾಡುತ್ತದಂತೆ. 11 ಘಂಟೆಯೊಳಗೆ ಮಲಗುವ ಸಂಕಲ್ಪವನ್ನಂತೂ ಹೊಸ ವರ್ಷಕ್ಕೆ ಮಾಡಿದ್ದ! ಹೊರಗಿನ ಊಟವನ್ನು ಅಷ್ಟಾಗಿ ಇಷ್ಟಪಡದ ಇವನು ಹಾಸ್ಟೆಲ್ ಊಟದಿಂದ ಕಂಗೆಟ್ಟಿರುವ ನಾಲಿಗೆಗಾಗಿ ಶೇಂಗಾ, ಕೆಚಪ್, ಅಲು ಭುಜಿಯಾಗಳ ಯಥೇಚ್ಛ ಸಪ್ಲಯ್ ಇಟ್ಟುಕೊಂಡಿರುತ್ತಾನಂತೆ (ಯಾವುದರ ಜೊತೆ ಹೇಗೆ ತಿನ್ನುತ್ತಾನೇ ನಂಗೊತ್ತಿಲ್ಲ). ಆಗಲೇ ಹೇಳಿದಂತೆ ಇವ ಪಕ್ಕ ಉತ್ತರ ಕರ್ನಾಟಕದ ಮಂದಿ ಅಂದ ಮೇಲೇ ಚಹಾವನ್ನು ಹೇಗೆ ಮರೆಯಲಿ (ಕ್ಷಮೆ ಇರಲಿ 'ಚಾ' ಅದು ಚಹಾ ಅಲ್ಲ) 'ಚಾ'ದೊಂದಿಗಿನ ಇವನ ಪ್ರೇಮ ಕಥೆಯನ್ನು ಅವನಿಂದಲೇ ಕೇಳಿದರೆ ಚಂದ. ಚಿಕ್ಕಮಗಳೂರಿನಲ್ಲೂ ಹುಡುಕಿ ಕುಡಿಯುವ ಈತ 'ಚಾ'ದ loyal ಅಭಿಮಾನಿ. Loyal ಅಂದಾಕ್ಷಣ ನೆನೆಪಾಯ್ತು ನೋಡಿ ಈತ ನಮ್ಮ 'ಆರ್‌ಸಿಬಿ'ಯ, ಕ್ರಿಕೆಟ್‌ನ ವಿಶೇಷವಾಗಿ ವಿರಾಟ್ ಕೋಹ್ಲಿಯ ಕಟ್ಟಾ ಅಭಿಮಾನಿ. ಅವರ ಎಲ್ಲಾ ದಾಖಲೆಗಳು, ಯಾವ ಮ್ಯಾಚ್ನಲ್ಲಿ ಎಷ್ಟು ರನ್‌ಗಳನ್ನು ಹೊಡೆದಿದ್ದರು ಎಂಬುದೆಲ್ಲವೂ ಇವನ ನಾಲಿಗೆಯ ತುದಿಯಲ್ಲಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ತನ್ನನ್ನು ಅಂತರ್ಮುಖಿ ಎಂದು ಹೇಳಿಕೊಳ್ಳುವ ಇವನು ಮಾತನಾಡಲು ಪ್ರಾರಂಭಿಸಿದರೆ ವರುಷಗಳ ನಂತರ ಸಿಕ್ಕ ಹಳೆಯ ಗೆಳೆಯನಂತೆ ಗಂಟೆಗಟ್ಟಲೇ ಮಾತನಾಡಬಲ್ಲ... 'ಮಾತು' ಬಂದಮೇಲೆ ಬೈಗುಳಗಳನ್ನ ಹೇಗೆ ಬಿಡಲು ಸಾಧ್ಯ! ಈ 'ವಿಶೇಷ ಪದಪುಂಜಗಳು’ ಬೈಗುಳಗಳಲ್ಲ, ಅವು ಉತ್ತರ ಕರ್ನಾಟಕ ಭಾಷೆಯ ಸೊಗಡಿನ ಭಾಗವೇ ಆಗಿದೆ ಎನ್ನುವ ಇವನು ಅದೇ ಪದಪ್ರಯೋಗದಿಂದ ಪಜೀತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಉಂಟು! “ಈಗ ಗಂಟಲಿಗೆ ಫಿಲ್ಟರ್ ಕೂಡ್ಸೆವಿ' ಎಂದು ಅಭಯವನ್ನೂ ನೀಡುತ್ತಾನೇ!

‘ವಿದ್ಯುನ್ಮಾನ ಮತ್ತು ಸಂವಹನ' ವಿಭಾಗದ ವಿದ್ಯಾರ್ಥಿಯಾಗಿರುವ ಇವನು ತಾಂತ್ರಿಕ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣದ ನಂತರ ವಿಭಾಗದಲ್ಲಿ 'ಸುಧನ್ವ ಅಣ್ಣ'ನ fan base ಬಹಳ ದೊಡ್ಡದಾಗಿದೆ ಎನ್ನುತ್ತದೆ ಮಾಹಿತಿ. ಏನೇ ಕೆಲಸವಿದ್ದರೂ ಸಂಪಾದಕ ಮಂಡಳಿಯ ಕೆಲಸಗಳಿಗೆ ಪ್ರಾಧಾನ್ಯತೆ ಕೊಟ್ಟು ಮಾಡಿಮುಗಿಸುವ ಶಿಸ್ತಿನ ಸಿಪಾಯಿ ಅಷ್ಟೇ ಅಲ್ಲದೇ ಸ್ನೇಹ ಜೀವಿಯೂ ಹೌದು! ಕೆಲಸ ಏನೇ ಇರಲಿ ಅದನ್ನ ಸುಧನ್ವ ವಹಿಸಿಕೊಂಡರೆ ಅದು ಸಮಯಮಿತಿಯೊಳಗೆ ಪರಿಪೂರ್ಣವಾಗಿ ಮುಗಿದಿರುತ್ತದೆ ಎಂದೇ ಅರ್ಥ. ನನ್ನಂತ ಆಲಸಿಗಳು ಇವನಿಂದ ಕಲಿಯುವುದು ಬಹಳಷ್ಟಿದೆ. ಅರಳು ಹುರಿದಂತೆ ಶ್ಲೋಕ, ಮಂತ್ರಗಳನ್ನು ಹೇಳುವ ಇವ ಪರಮ ದೈವ ಭಕ್ತ. ಕಟ್ಟು ನಿಟ್ಟಿನ ಒಪ್ಪತ್ತು, ಉಪವಾಸಗಳು ಇವನ ಜೀವನ ಶೈಲಿಯ ಅವಿಭಾಜ್ಯ ಅಂಗವೇ ಆಗಿದೆ. ಭಾರತೀಯ ಸೇನೆಯ ಮೇಲೇ ವಿಶೇಷ ಗೌರವಾಭಿಮಾನ ಇವನಿಗೆ, ಪ್ರಚಲಿತ ವಿದ್ಯಾಮಾನ, ವಿದೇಶಾಂಗ ನೀತಿಗಳಲ್ಲಿ ಆಸಕ್ತಿ ಇರುವ ಇವನು ಕನ್ನಡ ವಿಭಾಗದ ಸ್ವಯಂಪ್ರೇರಿತ ಕ್ವಿಜ್ ಮಾಸ್ಟರ್ ಎಂದರೆ ತಪ್ಪೇನಿಲ್ಲ.

ಇವನ ಬಗ್ಗೆ ಇಷ್ಟೆಲ್ಲ ಓದಿದ ಮೇಲೆ, ಇವನು ಇನ್ಸ್ಟಾಗ್ರಾಮ್ ಅಲ್ಲಿ ಲೈಕ್ ಒತ್ತಿದ ರೀಲ್ಸ್‌ಗೂ ನಾನು ಬರೆದಿರುವುದಕ್ಕೂ ಸಂಬಂಧವೇ ಇಲ್ಲ ಎನ್ನಿಸಿದರೂ ಆಶ್ಚರ್ಯವೇನಿಲ್ಲ... ವಿಶೇಷ ಸಂಗೀತ ಅಭಿರುಚಿ ಹೊಂದಿರುವ ಈತನ ಪ್ಲೇಲಿಸ್ಟ್‌ನಲ್ಲಿ ಕಿವಿಗಿಂಪನ್ನು ಕೊಡುವ ಭಾಷೆಯ ಮಿತಿ ಇಲ್ಲದಂತೆ ಅಂಡರ್‌ರೇಟೆಡ್ ಹಾಡುಗಳ ಸಾಲೇ ಇದೆ. ಇದಕ್ಕೊಂದು ಮೆಚ್ಚುಗೆಯಂತು ಕೊಡಲೇ ಬೇಕು... ಏನಂತೀರಿ?

ಘಂಟೆಗಟ್ಟಲೇ ಮಾಡಿದ ಗಾಸಿಪ್‌ಗಳು, ಅಸಂಬದ್ಧ ವಾದವಿವಾದಗಳು, ಒಟ್ಟಿಗೆ ಕೂತು ಬರೆದ ಲೇಖನಗಳು ಹೀಗೆ ಸಂಪಾದಕ ಮಂಡಳಿಯೊಡನೆ ಕಳೆದ ಕ್ಷಣಗಳೆಲ್ಲವೂ ನೆನಪಿನ ಖಜಾನೆಯಲ್ಲಿ ಭದ್ರಪಡಿಸುತ್ತಾ, ನಿನ್ನ ಭವಿಷ್ಯವು ಸಂತೋಷ ಯಶಸ್ಸುಗಳಿಂದ ತುಂಬಿರಲಿ ಎಂದು ಆಶಿಸುತ್ತಾ, ಈ ಬರಹಕ್ಕೊಂದು ಪೂರ್ಣವಿರಾಮವಿಡುತ್ತೇನೆ.


Character Stats
Geekiness
Introversion
Peching
Paapaness
Speciality
Learns new things quickly

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Shashank Venkatesan
  • Prarthana G. P.
  • Vinay Vasishta
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Harsha Bhat
  • Poorvi Shetty
  • Sanchita V. Kumar
  • Surabhi Seenivasan
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Bhuvan Koduru
  • Anagha Honnali
  • Abhilash Hathwar
  • Vadiraj B Hayagreeva
  • Pruthvi K P
  • Sharmilee Sosale
  • Sudhanva Kulkarni
  • Shreyas S
  • Poornima Hegde
  • Ninaad A Kaller
  • Gurudarshan M J
  • Vaishnavi Bharadwaj
  • Anurag G
  • Unnathi Prabhu
  • Tarun T
  • Shivani M
  • Anjana Hegde
  • Bhoomika S G
  • Anushree Bhat
  • Ananya P
  • Sai Supritha K P
  • Yashaswi V
  • Diya Sharvani