Anjana Hegde
Mosranna
Graduated, CSE
ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಬಾಯಿ
ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯಿ
ಈ ಹಾಡು ಕೇಳಿದಾಗಲೆಲ್ಲ ನನಗೆ ನೆನಪಾಗುವ ಮುಖವೇ ಪಟಪಟನೆ ಮಾತನಾಡುವ 'ಅಂಜನಾ'ಳದ್ದು. ಹೈಸ್ಕೂಲ್ ಹೋಗುವ ಹುಡುಗಿಯಂತೆ ಕಾಣುವ ಶಿರಸಿಯ ಈ ಪೋರಿ ಅಂತಿಮ ವರ್ಷದ ಗಣಕ ತಂತ್ರಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆಂದರೆ 'ಓ ಇವರು ಫೈನಲ್ ಇಯರ್ ನವರಾ' ಎಂದು ಎಲ್ಲರೂ ಆಶ್ಚರ್ಯ ಪಡುತ್ತಾರೆ. ನಮ್ಮಂತೆ ಬೇರೆಯವರೂ ಇವಳನ್ನು ವಯಸ್ಸಿನಲ್ಲಿ ಚಿಕ್ಕವಳೆಂದೇ ಗ್ರಹಿಸಿದ್ದಿರಬೇಕು, ಏಕೆಂದರೆ ಪ್ರತಿ ಬಾರಿಯೂ ಇವಳು ಯಾವುದೇ ಸಿನಿಮಾ ನೋಡಲು ಹೋದಾಗ ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಬೇರೆ ಯಾರಿಗೂ ಕೇಳದಿದ್ದರೂ ಮೊದಲಿಗೆ ಇವರ ಐ. ಡಿ. ಪ್ರೂಫ್ ಕೇಳುತ್ತಾರಂತೆ! ನೋಡಲಷ್ಟೇ ಅಲ್ಲದೆ ಇವಳು ಮಾಡುವ ಜೋಕ್ಸ್ ಕೂಡ ಚಿಕ್ಕ ಮಕ್ಕಳಂತೆಯೆ ಇದೆ.
ತನ್ನ ಗೆಳೆಯರು, ತಮ್ಮನ ಜೊತೆ ಹೆಚ್ಚಾಗಿ ಕಾಲ ಕಳೆಯುವ ಇವಳು ಪ್ರತಿರಾತ್ರಿಯೂ ತಪ್ಪದೆ ತನ್ನ ಗೆಳತಿಯರಿಗೆ ವೀಡಿಯೋ ಕಾಲ್ ಮಾಡಿ ಹರಟುತ್ತಾಳೆ. ಇದಲ್ಲದೆ ತನ್ನ ಹೆಚ್ಚಿನ ಸಮಯವನ್ನು ಧಾರವಾಹಿಗಳನ್ನು, ರಿಯಾಲಿಟಿ ಶೋ ಗಳನ್ನು ವೀಕ್ಷಿಸುವುದರಲ್ಲಿ, ಅದರಲ್ಲಿನ ಪಾತ್ರಗಳನ್ನು ಬೇರೆಯವರೊಂದಿಗೆ ವಿಶ್ಲೇಷಿಸುವುದರಲ್ಲಿ ಕಳೆಯುತ್ತಾಳೆ. ರೀಲ್ಸಗಳನ್ನು ನೋಡಿ attention span ಕಡಿಮೆಯಾಗುತ್ತದೆ ಎಂಬ ಚಿಂತೆ ಬೇರೆಯವರಿಗಿದ್ದರೆ ಇವಳು ಮಾತ್ರ ವರ್ಷಾನುಗಟ್ಟಲೆ ನಡೆಯುವ ಧಾರವಾಹಿಗಳನ್ನು ನಿಶ್ಚಿಂತೆಯಿAದ ನೋಡುತ್ತಾಳೆ. ಒಂದು ಪುಸ್ತಕ ಓದಿದ ನಂತರ ಅದರಲ್ಲಿನ ವಿಷಯಗಳನ್ನು ಕೇಳಿದಾಗ ಪುಟ ಸಮೇತ ತಿಳಿಸುವ ಮಹನೀಯರಂತೆ ಅಂಜನಾಳಿಗೆ ಧಾರವಾಹಿಯಲ್ಲಿ ನಡೆದ ಯಾವುದೇ ಘಟನೆಯನ್ನು ಕೇಳಿದಾಗ ಅದರ ಸಂಚಿಕೆಯೊAದಿಗೆ ಆ ಪಾತ್ರಗಳು ತೋರ್ಪಡಿಸಿದ ಸ್ವರದ ಏರಿಳಿತವನ್ನೂ ಅನುಕರಿಸಿ ವಿವರಿಸುತ್ತಾಳೆ.
ಆದರೆ ವಿಷಾದದ ಸಂಗತಿ ಏನೆಂದರೆ ಇತ್ತೀಚಿನ ಧಾರವಾಹಿಗಳು ಚೆನ್ನಾಗಿಲ್ಲವೆಂದು ಬೇಸರ ವ್ಯಕ್ತಪಡಿಸುತ್ತಾ Web seಡಿies ನೋಡುವ ಹವ್ಯಾಸವನ್ನು ಬೆಳೆಸಿದ್ದಾಳೆ. ಈ ಎಲ್ಲಾ ಕೆಲಸಗಳಿಗೆ ವ್ಯಯಿಸುವ ಸಮಯವು ಕಿuಚಿಟiಣಥಿ ಣime ಆಗಿದ್ದು, ಇವುಗಳಿಲ್ಲದೆ ಇವರ ದೈನಂದಿನ ಕೆಲಸಗಳು ಸುಗಮವಾಗಿ ನಡೆಯುವುದಿಲ್ಲವೆಂದೇ ಹೇಳಬಹುದು. ಇಷ್ಟಲ್ಲದೆ ನಿದ್ರಾದೇವಿಯ ವಿಶೇಷ ಕೃಪಾಕಟಾಕ್ಷಕ್ಕೆ ಪಾತ್ರಳಾಗಿರುವ ಈಕೆ ಬಿಡುವು ಸಿಕ್ಕಾಗಲೆಲ್ಲ ನಿದ್ದೆಗೆ ಜಾರುತ್ತಾಳೆ, ಒಮ್ಮೆ ತರಗತಿಯಲ್ಲೇ ನಿದ್ದೆಗೆ ಜಾರಿ ಶಿಕ್ಷಕರ ಕೈಯಲ್ಲಿ ಬೈಸಿಕೊಂಡದ್ದು ಇದೆ. ತನ್ನ ಕೋಣೆಯಲ್ಲಿ ಹಾಸಿಗೆಯನ್ನು ಗೋಡೆಯ ಹತ್ತಿರ ಸರಿಸಿ ಹಾಯಾಗಿ ಮಲಗಿಕೊಂಡಿರುತ್ತಾಳAತೆ. ಬಿಡುವಿನಲ್ಲಿ ತನ್ನ ರೂಮ್ ಮೇಟ್ ಜೊತೆಗೆ ಆಗಾಗ ಜಗಳವಾಡುತ್ತಾ, ಪಿ. ಜಿ. ಆಂಟಿಯ ಕಡೆಯಿಂದ ಬೈಸಿಕೊಳ್ಳುತ್ತಾ ತನ್ನ ದಿನವನ್ನು ಕಳೆಯುತ್ತಾಳೆ. ಕ್ಲಾಸಿನಲ್ಲಿ ಅಷ್ಟಾಗಿ ಪಾಠ ಕೇಳದಿದ್ದರೂ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಎಲ್ಲರನ್ನು ಆಶ್ಚರ್ಯಗೊಳಿಸುತ್ತಾಳೆ.
ನೆಚ್ಚಿನ ಗೆಳತಿಯರೊಂದಿಗೆ ಸಮಯ ಕಳೆಯುವುದು, ರಿಯಾಲಿಟಿ ಶೋಗಳನ್ನು ನೋಡುವುದಲ್ಲದೆ Iಛಿe ಛಿಡಿeಚಿm ತಿನ್ನುವುದೆಂದರೆ ಅಂಜನಾಳಿಗೆ ಪಂಚಪ್ರಾಣ. ಐಚಿಡಿಚಿs ಅಲ್ಲಿ ಸಿಗುವ ಸಿಪ್ಪಿ ಐಸ್ ಕ್ರೀಮ್ ನ ಎಲ್ಲಾ ವಿಧಗಳನ್ನು ತಿಂದಿದ್ದಾಳೆ. ಬಹುಶಃ ಇವರು ಛಿhiಟಟ ಸ್ವಭಾವಕ್ಕೆ ಇದೇ ಕಾರಣವೊ ಏನೊ? ಬೆಳಗಿನ ತಿಂಡಿಗೂ ಕೆಲವೊಮ್ಮೆ ಐಸ್ ಕ್ರೀಮ್ ತಿನ್ನುವ ಇವರನ್ನು 'ಹೇಗಮ್ಮ ತಿನ್ನುತ್ತೀಯಾ' ಎಂದು ಯಾರಾದರೂ ಕೇಳಿದರೆ ಐಸ್ ಕ್ರೀಮ್ ತಿನ್ನಲು ಯಾವುದೇ ಸಮಯದ ನಿಬಂಧನೆಯನ್ನು ಒಡ್ಡಬಾರದೆಂದೂ, ಬೆಳಗಿನ ಜಾವದಲ್ಲಿ ತಿಂದಾಗ ಸಿಗುವ ರುಚಿಯನ್ನು ವಿವರಿಸಿ, ಕೇಳಿದವರೂ ಒಮ್ಮೆ ಣಡಿಥಿ ಮಾಡುವಂತೆ ಪುಸಲಾಯಿಸುತ್ತಾರೆ. ಇದಲ್ಲದೆ ಬೇರೆ ಬೇರೆ ಕುರುಕಲು ತಿಂಡಿಗಳನ್ನು, ಛಿhಚಿಣ ಮಾಡುತ್ತಾ ಛಿhಚಿಣ iಣems ಗಳನ್ನು ಹಾಗೂ pizza ತಿನ್ನೋದೆಂದರೂ ಇಷ್ಟ. ತನ್ನ ತಮ್ಮನೊಂದಿಗೆ ಆಗಾಗ Dominos ಹೋಗಿ pizza ತಿನ್ನುತ್ತಾಳಂತೆ (ಯಾವುದೇ ಬ್ರಾಂಡ್ ಪ್ರೊಮೋಷನ್ ಅಲ್ಲ), ಒಂದೆರಡು ಬಾರಿ ಈ ಕಾರಣದಿಂದ ಸಂಪಾದಕ ಮಂಡಳಿಯ 'ಮೀಟ್' ಗೆ ತಡವಾಗಿ ಬಂದದ್ದು ಇದೆ. ಇ ತ್ತೀಚೆಗೆ ತಮ್ಮ ಫಿಟ್ನೆಸ್ ಜರ್ನಿಯನ್ನು ಪ್ರಾರಂಭಿಸಿ ಉಥಿmಗೆ ಹೋಗಲು ಶುರು ಮಾಡಿರುವುದರಿಂದ ಕಟ್ಟುನಿಟ್ಟಿನ ಆಹಾರ ಸೇವನೆಯನ್ನು ಪಾಲಿಸುತ್ತಿದ್ದಾರಂತೆ. ಈ ಫಿಟ್ನೆಸ್ ಪಯಣವು ಯಾವುದೇ ಅಡಚಣೆಯಿಲ್ಲದೆ ಸುಗಮವಾಗಿ ಸಾಗಲಿಯೆಂದು ಆಶಿಸುತ್ತೇವೆ. ಕಾಲೇಜಿಗೆ ರಜೆ ಸಿಕ್ಕರೆ ಸಾಕು, ತಮ್ಮೂರಿಗೆ ಹೊರಡುವ ಇವಳು ಪ್ರತಿಸಲವೂ ಮನೆಗೆ ಹೋದಾಗ ಅಪ್ಪೆಹುಳಿ, ತಂಬುಳಿಗಳನ್ನೊಳಗೊAಡ ಅಪ್ಪಟ ಹವ್ಯಕ ಶೈಲಿಯ ಊಟ ಮಾಡಿ, ಶಿರಸಿಯ ನೈಸರ್ಗಿಕ ಸೌಂದರ್ಯವನ್ನು ಸವಿದು ತಾಯಿ ಮಾರಿಕಾಂಬೆಯ ದರ್ಶನವನ್ನು ಪಡೆಯುತ್ತಾರಂತೆ.
ಇವಳು ವಿನಮ್ರವಾಗಿ ಹಾಗೂ ಸರಾಗವಾಗಿ ಮಾತನಾಡಿ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಇಂದ ಹಿಡಿದು ಅಧ್ಯಾಪಕರವರೆಗೆ ಎಲ್ಲರ ಮನೆಗೆದ್ದು ಸಂಪಾದಕ ಮಂಡಳಿಯ ಕೆಲಸಗಳನ್ನು ಮಾಡಿಸುತ್ತಾಳೆ.
ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನ, ಇತಿಹಾಸ, ರಾಜಕೀಯ ಮುಂತಾದವುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವಳು ಸಂಪಾದಕ ಮಂಡಳಿಯ ರಸಪ್ರಶ್ನಾ ಸ್ಪರ್ಧೆಗಳಿಗೆ ಪ್ರಮುಖ ರೂವಾರಿ.
'ಥಟ್ ಅಂತ ಹೇಳಿ'ಯ ಡಾ. ನಾ. ಸೋಮೇಶ್ವರರಂತೆ ಇವಳಿಗೂ ಕಾಲೇಜಿನಲ್ಲಿ ಒಂದು ದೊಡ್ಡದಾದ ಈಚಿಟಿbಚಿse ಇದೆ. ದಿನಪತ್ರಿಕೆಯನ್ನು ಓದುತ್ತಾ ಅದರಲ್ಲಿನ ಪದಬಂಧವನ್ನು ಬಿಡಿಸುವುದೂ ಇವಳ ಹವ್ಯಾಸಗಳಲ್ಲೊಂದು. ಸದಾ ಕಾರ್ಯೋನ್ಮುಖಿಯಾಗಿರುವ ಈ ಹಸನ್ಮುಖಿ, ಪಾಸಿಟೀವ್ ಸ್ವಭಾವದ ಅಂಜನಾಳ ಜೀವನ ಸಂತೋಷ, ಯಶಸ್ಸುಗಳಿಂದ ತುಂಬಿರಲಿ ಹಾಗೂ ತನ್ನ ಮಾತಿನ ಚಾಕಚಕ್ಯತೆ, ಪ್ರಚಲಿತ ವಿದ್ಯಮಾನಗಳ ಜ್ಞಾನ, (ಧಾರವಾಹಿಗಳಿಂದ ಸಿಕ್ಕ ನೈತಿಕ ಮೌಲ್ಯ)ಗಳನ್ನು ಬಳಸಿ ಮುಂದೊAದು ದಿನ ನಾಗರಿಕ ಸೇವಾ ಪರೀಕ್ಷೆಯನ್ನು ಬರೆದು ಐ. ಎ. ಎಸ್ ಆಗಲಿ ಎಂದು ಆಶಿಸುವೆ.











































