Ananya K.

Ananya K.

"I love maintaining a 9.0 CGPA."

Graduated, CSE

ಇಗೋ, ನೋಡಿಲ್ಲಿ ಗಾಢ ನೀಲಿ ಬಣ್ಣದ ದಿರಿಸನ್ನು ಧರಿಸಿ, ಬರ್ಗಂಡಿ ಬಣ್ಣದ ಹೈಲೈಟ್ಸ್ ಇರುವ ಕೂದಲನ್ನು ಹಾರಿಸುತ್ತಾ, ತನ್ನ ಆಕ್ಟಿವಾ ಗಾಡಿ ಮೇಲೆ ‘ಜ಼ೂಂಯ್' ಎನ್ನುತ್ತಾ ಹಂಪ್‌ಗಳನ್ನು ಹಾರಿಸಿಕೊಂಡು ಬರುತ್ತಿರುವುದು? ಅವಳ ನೆಚ್ಚಿನ ಪಾರ್ಕ್ನಲ್ಲಿ ನೀಲಿ ಬಣ್ಣದ ವೈರ್ಲೆಸ್ ಇಯರ್‌ಫೋನ್ಸ್ನ್ನು ಕಿವಿಗೆ ಚುಚ್ಚಿಕೊಂಡು ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದ ಮೇಲೆ, ದಾರಿ ಸವಿದುದೂ ತಿಳಿಯುತ್ತಿಲ್ಲ, ಸಮಯದ ಪರಿವೆಯೂ ಇಲ್ಲ. ಇವಳಿಗಿಂತ ಮುಂಚೆ ಬಂದ ಆಂಟಿ-ಅAಕಲ್‌ಗಳು ಹೊರಡುತ್ತಾ “ಇನ್ನೂ ವಾಕಿಂಗ್ ಆಗಿಲ್ಲವೇನಮ್ಮ” ಅಂತ ಪ್ರಶ್ನಿಸಿದಾಗಲೇ ಅವಳು ವಾಸ್ತವಕ್ಕೆ ಮರಳುವುದು.
ಇವಳೇ ಅನನ್ಯ. ಸಂಪಾದಕ ಮಂಡಳಿಯ ಒಂದು ಅನರ್ಘ್ಯ ರತ್ನ. ಈ ರತ್ನದ ಸೇರ್ಪಡೆಯಿಂದ ಮಂಡಳಿಗೆ ಒಂದು ರೀತಿಯ ಹುರುಪು ಬಂದಿದೆ. ತನ್ನ ಕಾರ್ಯ ವೈಖರಿಯಿಂದ ಎಲ್ಲರನ್ನು ತನ್ನತ್ತ ಸೆಳೆದುಕೊಳ್ಳುವ ಮಾಂತ್ರಿಕ ಶಕ್ತಿ ಇದೆ. ಯಾವುದೇ ಗೊಂದಲ-ಅನಿಶ್ಚಿತತೆ ಇಲ್ಲದೆ, ಹಸನ್ಮುಖಿಯಾಗಿ, ತನಗೆ ವಹಿಸಿದ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮುಗಿಸುವಳು. ಎಷ್ಟೇ ಒತ್ತಡದಲ್ಲಿ ಕೆಲಸ ಮಾಡಬೇಕಾದರೂ, ತನ್ನ ಸಹನೆಯನ್ನು ಕಳೆದುಕೊಳ್ಳದೆ, ಸ್ಥಿತಪ್ರಜ್ಞಳಾಗಿ ಇರುವಳು. ಎಷ್ಟರ ಮಟ್ಟಿಗೆಂದರೇ, ಒಮ್ಮೆ ಮಂಡಳಿಯೊಬ್ಬರು ಅವಳ ಗಾಡಿ ‘ಕೀ'ಯನ್ನು ಕಳೆದಾಗಲೂ, ಗಾಬರಿ ಗೊಳ್ಳದೆ “ಗಾಡಿ ಸೇಫ್ ಇದ್ಯಲ್ಲ, ಸಾಕು” ಎಂದಳು.
ಇವಳನ್ನು ಮೊದಲ ಸಲ ಮಾತನಾಡಿಸಿದವರು ‘ಮೌನಿ' ಎಂದು ಪಟ್ಟ ಕಟ್ಟಿದರೆ, ತಪ್ಪಾದೀತು. ಒಮ್ಮೆ ಸ್ನೇಹಿತರೆಂದು ಸ್ವೀಕರಿಸಿದರೆ, ಹರಟೆ ಮಲ್ಲಿ. ಬರಿ ಮಾತಷ್ಟೇ ಅಲ್ಲ, ಪ್ರೀತಿಯಿಂದ ಅವರನ್ನು ತನ್ನವರಂತೆ ನೋಡಿಕೊಳ್ಳುವಳು. ಬಹುಶಃ ಕೋಪ ಎಂಬುದು ಹುಟ್ಟಿದಾರಭ್ಯ ಬಂದಿಲ್ಲವೇನೋ. ನಾನಂತೂ ಇದುವರೆಗೂ ನೋಡಿಲ್ಲ.
ಈ ತಾಂತ್ರಿಕತೆಯ ಯಾಂತ್ರಿಕ ಬದುಕಿಗಿಂತ, ಈಕೆಗೆ ಕಲೆ ನೀಡುವ ಸ್ವಚ್ಛಂದ ಬದುಕೇ ಪ್ರಿಯ. ಅವಳ ಮುಂದೆ ಒಂದೆರಡು ಕುಂಚಗಳು ಹಾಗು ಒಂದಿಷ್ಟು ಬಣ್ಣಗಳನ್ನು ಇಟ್ಟರೆ ಸಾಕು, ಅದ್ಭುತ ಚಿತ್ರವೊಂದು ಕ್ಷಣಮಾತ್ರದಲ್ಲಿ ಮೂಡುವುದು. ಅಷ್ಟು ಪಳಗಿರುವ ಕೈ. ಸುಮಾರು ಒಂದನೇ ಕ್ಲಾಸ್‌ನಲ್ಲಿ ಶುರು ಆದ ಚಿತ್ರಕಲೆಯ ಮೇಲಿನ ಪ್ರೀತಿ, ಇಂದಿಗೂ ನಿರಂತರವಾಗಿ ಸಾಗುತ್ತಲೇ ಬಂದಿದೆ. ತನ್ನ ಕಣ್ಣಿಗೆ ಕಾಣುವ ಪ್ರತಿಯೊಂದರಲ್ಲೂ ಸೃಜನಾತ್ಮಕತೆಯನ್ನು ಕಾಣುವಳು. ಅವಳು ಒಂದು ಶೈಲಿಗೆ ಅಂಟಿಕೊಳ್ಳದೆ, ವಿಭಿನ್ನ ರೀತಿಯ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದ್ದಾಳೆ. ಕಾಲೇಜಿನಲ್ಲಿ ಏನೇ ಕಾರ್ಯಕ್ರಮ ನಡೆದರೂ, ಮುಖ್ಯ ಅತಿಥಿಯ ಭಾವಚಿತ್ರವನ್ನು ಸೀಸದ ಕಡ್ಡಿಯಿಂದ ಸ್ಕೆಚ್ ಮಾಡಿ ಅವರಿಗೆ ಸ್ಮರಣಿಕೆಯ ರೂಪದಲ್ಲಿ ನೀಡುವಳು.
ಎಲ್ಲರ ಪ್ರಶಂಸೆಗೆ ಪಾತ್ರರಾಗುವಳು. ನಾವು ಕಳೆದ ವರ್ಷ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾ|| ನಾ. ಸೋಮೇಶ್ವರ ಅವರ ಚಿತ್ರವನ್ನ ರಚಿಸಿದ ಕ್ರೆಡಿಟ್ ಈಕೆಗೆ ಸಲ್ಲಬೇಕು. ಇತ್ತೀಚಿನವರೆಗೆ ಕೇವಲ ಹವ್ಯಾಸವಾಗಿದ್ದ ಕಲೆ- ಕೋದಂಡ ರಾಮನ ಚಿತ್ರವನ್ನು ತಂಜಾವೂರು ಶೈಲಿಯಲ್ಲಿ ರಚಿಸುವ ಆರ್ಡರ್ ದೊರೆತ ಮೇಲೆ- ವೃತ್ತಿಯಾಗಿ ಮಾರ್ಪಾಡಾಗುತ್ತಿದೆ. ಕೇವಲ ಇವಷ್ಟೇ ಅಲ್ಲದೆ, ತನ್ನ ಉಗುರುಗಳಿಗೆ ಚಂದ-ಚAದ ಬಣ್ಣಗಳನ್ನು ಹಾಕಿ, ಸುಂದರ ರೂಪ ಕೊಡುವಳು. ಅವಳ ಈ ಎಲ್ಲಾ ಸಾಧನೆಗಳಿಗೆ ಬೆನ್ನೆಲುಬಾಗಿ ನಿಂತಿರುವುದು, ಅವಳ ಅಮ್ಮ. ಅವಳು ತನಗೆ ಸಿಕ್ಕ ಪ್ರೀತಿ ಯಶಸ್ಸನ್ನು ಸಂಪಾದಕ ಮಂಡಳಿಯೊAದಿಗೆ ಹಂಚಿಕೊಳ್ಳುತ್ತಾ, ಸಿಹಿ ವಿತರಿಸುತ್ತಾ ಸಂಭ್ರಮಿಸುವಳು.
ಬರಿ ಚಿತ್ರಕಲೆ ಅಷ್ಟೇ ಅಲ್ಲ, ಈಕೆ ಕ್ರೀಡಾಪಟುವೂ ಹೌದು. ತ್ರೋಬಾಲ್, ಬಾಸ್ಕೆಟ್‌ಬಾಲ್, ವಾಲಿಬಾಲ್ ಹಾಕಿ- ಮುಂತಾದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದಾಳೆ. ಇದರ ಜೊತೆಗೆ ಆಗೊಮ್ಮೆ-ಈಗೊಮ್ಮೆ ಸ್ನೇಹಿತರೊಂದಿಗೆ ಊರೂರು ಸುತ್ತೋದು ಇಷ್ಟ. ಅಲ್ಲಿಯ ವಿಶೇಷ ತಿನಿಸುಗಳ ರುಚಿ ನೋಡುವುದೂ ಇಷ್ಟ.
ಅವಳ ಈ ಚಂದದ ಬದುಕಿಗೆ ಯಾರ ಕೆಟ್ಟ ಕಣ್ಣು ಬೀಳದಿರಲಿ. ಸ್ವಚ್ಛಂದವಾಗಿರುವ ಪಕ್ಕಿಯಂತೆ- ಗರಿ ಬಿಚ್ಚುತ್ತಾ, ಖುಷಿಯಿಂದ ಎತ್ತರಕ್ಕೆ ಹಾರುತ್ತ, ಎಲ್ಲಾ ಸಂಕಷ್ಟಗಳನ್ನು ಭೇದಿಸುತ್ತಾ, ತನ್ನ ಎಲ್ಲಾ ಗುರಿಗಳನ್ನು ಸಾಧಿಸುತ್ತಾ, ಅಭಿವೃದ್ಧಿಯ ಪಥದತ್ತ ಸಾಗಲಿ, ಎಂದು ನಾನು ಆಶಿಸುತ್ತೇನೆ. ಹಾಗೆ ಟೈಮ್-ಟೈಮ್‌ಗೆ ನಮಗೆ ಕಾಜು ಕತ್ಲಿ ಕೂಡ ಸಿಗ್ತಾ ಇರಲಿ.


Character Stats
Geekiness
Introversion
Peching
Paapaness
Speciality
Keen senses

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Shashank Venkatesan
  • Prarthana G. P.
  • Vinay Vasishta
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Harsha Bhat
  • Poorvi Shetty
  • Sanchita V. Kumar
  • Surabhi Seenivasan
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Bhuvan Koduru
  • Anagha Honnali
  • Abhilash Hathwar
  • Vadiraj B Hayagreeva
  • Pruthvi K P
  • Sharmilee Sosale
  • Sudhanva Kulkarni
  • Shreyas S
  • Poornima Hegde
  • Ninaad A Kaller
  • Gurudarshan M J
  • Vaishnavi Bharadwaj
  • Anurag G
  • Unnathi Prabhu
  • Tarun T
  • Shivani M
  • Anjana Hegde
  • Bhoomika S G
  • Anushree Bhat
  • Ananya P
  • Sai Supritha K P
  • Yashaswi V
  • Diya Sharvani